ಮಾನವೀಯತೆ ಸತ್ತೇ ಹೋಗಿದೆ ಎಂದು ಈಗ ಹೇಳುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್ ಆಗಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸುತ್ತದೆ.
20ಕ್ಕೂ ಅಧಿಕ ಮಂದಿ ಸೇರಿಕೊಂಡು ವಯಸ್ಸಾದ ವ್ಯಕ್ತಿಯ ಸಂಪೂರ್ಣ ಮನೆಯನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದೆ. ಗುಡ್ ನ್ಯೂಸ್ ಮೂವ್ಮೆಂಟ್ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ.
20ಕ್ಕೂ ಅಧಿಕ ಮಂದಿ ಫಿಲಿಪ್ಪೀನ್ಸ್ನ ಜಾಂಬೊಂಗಾ ಡೆಲ್ ನಾರ್ಟೆಯಲ್ಲಿ ಕಚ್ಚಾ ರಸ್ತೆಯ ಉದ್ದಕ್ಕೂ 7 ಅಡಿ ಎತ್ತರದ ಮನೆಯನ್ನು ಸಾಗಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಯಸ್ಸಾದ ಈ ವೃದ್ಧ ತನ್ನ ಸಾಯುವ ವಯಸ್ಸಿನಲ್ಲಿ ತನ್ನ ಮಗ ಮತ್ತು ಮೊಮ್ಮಕ್ಕಳಿಗೆ ಹತ್ತಿರವಾಗಲು ಇರಲು ಬಯಸಿದ್ದರಿಂದ ಈ ರೀತಿ ಸಹಾಯ ಮಾಡಲಾಗಿದೆ.
ಇಡೀ ಮನೆಯನ್ನು ಸಾಗಿಸಲು ಜನರು ಎರಡು ಗಂಟೆಗಳನ್ನು ತೆಗೆದುಕೊಂಡರು. ಇದರ ವೈರಲ್ ವಿಡಿಯೋಗೆ ಜನರು ಭಾವುಕರಾಗಿದ್ದು, ಕಮೆಂಟ್ಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದಾರೆ.