ಬೆಂಗಳೂರು: ಸಾಲದ ವಿಚಾರಕ್ಕೆ ಗಲಾಟೆಯಾಗಿ ನ್ಯಾಯಕ್ಕಾಗಿ ಇಬ್ಬರು ಮಹಿಳೆಯರು ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣೆಗೆ ಬಂದಿದ್ದಾರೆ.
ಗೀತಾ ಎಂಬುವರು ಪಡೆದ ಸಾಲದ ಹಣ ವಾಪಸ್ ಕೊಟ್ಟಿಲ್ಲ ಎಂದು ಶ್ವೇತಾ ಎಂಬುವರು ಆರೋಪಿಸಿದ್ದಾರೆ. ಬಡ್ಡಿ ಕೊಡುವುದಾಗಿ ನಂಬಿಸಿ ಮಗಳ ಮದುವೆಗೆ ಗೀತಾ ಹಣ ಪಡೆದುಕೊಂಡಿದ್ದರು. ಬೇರೆಯವರ ಕಡೆಯಿಂದ ಗೀತಾಗೆ ಶ್ವೇತಾ ಹಣ ಕೊಡಿಸಿದ್ದರು.
ಪ್ರತಿ ತಿಂಗಳು ಬಡ್ಡಿ ಹಣ ಪಾವತಿಸಿದ ಗೀತಾ ಈಗ ಸಾಲ ತೀರಿದೆ ಎಂದು ಹೇಳುತ್ತಿದ್ದಾರೆ. ಸಾಲದ ಹಣ 1.30 ಲಕ್ಷ ರೂ. ಕೊಡುವಂತೆ ಶ್ವೇತಾ ಒತ್ತಾಯಿಸಿದ್ದು, ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.