alex Certify ಮಹಿಳೆಯರಿಗೆ ಗುಡ್ ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ, ಶೇ. 50 ರಷ್ಟು ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಗುಡ್ ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ, ಶೇ. 50 ರಷ್ಟು ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮೈಸೂರು: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ರಾಜ್ಯ ಸರ್ಕಾರ ಒದಗಿಸಿರುವ ಸಹಾಯಧನ ಮತ್ತು ಬ್ಯಾಂಕುಗಳಿಂದ ಸಾಲವನ್ನು ಒದಗಿಸುವ ದೃಷ್ಠಿಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು 1 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ, ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ.50 ರಷ್ಟಕ್ಕೆ ಅದರಂತೆ ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು 1 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ, ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ.30 ರಷ್ಟಕ್ಕೆ ನಿಗದಿಪಡಿಸಲಾಗಿದೆ.

18 ರಿಂದ 55 ವರ್ಷದೊಳಗಿನವರು ಇತ್ತೀಚಿನ 2 ಭಾವಚಿತ್ರದೊಂದಿಗೆ ಆಧಾರ್ ಪ್ರತಿ, ಆದಾಯ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ವರ್ಗದ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗಳಿದ್ದು, ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷ ರೂ.ಗಳನ್ನು ಮೀರಿರಬಾರದು.

ಅರ್ಜಿಯ ಜೊತೆಗೆ ವಿಧವೆಯರು ಹಾಗೂ ಅಂಗವಿಕಲರು ಅರ್ಜಿಯನ್ನು ಸಲ್ಲಿಸಿದ್ದಲ್ಲಿ ವಿಧವಾ ಪ್ರಮಾಣ ಪತ್ರ ಹಾಗೂ ಅಂಗವಿಕಲ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಸಕ್ತರು ಅರ್ಜಿಯನ್ನು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ಪಡೆದು 2021 ರ ಸೆಪ್ಟೆಂಬರ್ 10 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.

ಮೈಸೂರು ಜಿಲ್ಲೆಯಲ್ಲಿರುವ ಪ್ರತೀ ತಾಲ್ಲೂಕಿಗೆ ಅಥವಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ 6 ರಂತೆ ಭೌತಿಕ ಗುರಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ದೂ.ಸಂ. 0821-2491962 (ಮೈಸೂರು ನಗರ), 0821-2567940 (ಮೈಸೂರು ಗ್ರಾಮಾಂತರ), 08227-261267 (ತಿ.ನರಸೀಪುರ), 8221297171 (ಬಿಳಿಕರೆÉ), 08221-226168 (ನಂಜನಗೂಡು), 08222-252254 (ಹುಣಸೂರು), 08228-255320 (ಹೆಚ್.ಡಿ.ಕೋಟೆ), 08223-262714 (ಕೃಷ್ಣರಾಜನಗರ)ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...