ನಾಸಿಕ್: ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಅಂಗವಾಗಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡದಲ್ಲಿ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಈ ಭರವಸೆ ನೀಡಿದ್ದಾರೆ.
ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ನೀಡುವುದು ಸೇರಿದಂತೆ ಐದು ಗ್ಯಾರಂಟಿ ಘೋಷಿಸಿದ ಮರುದಿನವೇ ರೈತ ಸಮುದಾಯಕ್ಕೆ ಗ್ಯಾರಂಟಿ ರೂಪದ ಭರವಸೆ ನೀಡಲಾಗಿದೆ.
ರೈತರ ಸಾಲ ಮನ್ನಾ, ರೈತರ ರಕ್ಷಣೆಗೆ ಕಾಯ್ದೆ, ಜಿಎಸ್ಟಿ ವ್ಯಾಪ್ತಿಯಿಂದ ಕೃಷಿಯನ್ನು ಹೊರ ತರಲಾಗುವುದು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡಲು ಸ್ವಾಮಿನಾಥನ್ ಸಮಿತಿ ವರದಿ ಜಾರಿ ಮಾಡಲಾಗುವುದು. ಬೆಳೆ ವಿಮೆ ಯೋಜನೆ ಸ್ವರೂಪ ಬದಲಾಯಿಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.