alex Certify ಗಮನಿಸಿ: ಅಂಚೆ ಕಚೇರಿಯ ಈ ಹೂಡಿಕೆಯಲ್ಲಿ ಸಿಗಲಿದೆ ಸಾಲ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಅಂಚೆ ಕಚೇರಿಯ ಈ ಹೂಡಿಕೆಯಲ್ಲಿ ಸಿಗಲಿದೆ ಸಾಲ ಸೌಲಭ್ಯ

ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುವುದು ಬಹಳ ಮುಖ್ಯ. ಜನರಿಗೆ ಉಳಿತಾಯದ ಬಗ್ಗೆ ತಿಳಿಸಲು ಸರ್ಕಾರ ಕೂಡ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೆ ತರ್ತಿದೆ. ಅಂಚೆ ಕಚೇರಿಯಲ್ಲೂ ಕೆಲ ಉಳಿತಾಯ ಯೋಜನೆಗಳಿವೆ.

ಸಣ್ಣ ಉಳಿತಾಯ ಯೋಜನೆಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಬಡ್ಡಿ ಇತರ ಯೋಜನೆಗಳಿಗಿಂತ ಹೆಚ್ಚಿರುತ್ತದೆ. ಹಣ ಕೂಡ ಸುರಕ್ಷಿತವಾಗಿರುತ್ತದೆ. ಈ ಸಣ್ಣ ಉಳಿತಾಯ ಯೋಜನೆಗಳ ದೊಡ್ಡ ಪ್ರಯೋಜನವೆಂದರೆ, ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಸಾಲದ ರೂಪದಲ್ಲಿ ಪಡೆಯಬಹುದು.

ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವೂ ಈ ಲಾಭವನ್ನು ನೀಡುತ್ತದೆ. ಪ್ರಮಾಣಪತ್ರವು 5 ವರ್ಷಗಳವರೆಗೆ ಇರುತ್ತದೆ. ಇದನ್ನು 1000 ರೂಪಾಯಿಗಳಿಗೆ ಖರೀದಿಸಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.

ಎನ್‌ಎಸ್‌ಸಿನಲ್ಲಿ ಶೇಕಡಾ 6.8 ರ ದರದಲ್ಲಿ ಬಡ್ಡಿ ಸಿಗುತ್ತದೆ. 1000 ರೂಪಾಯಿಗಳ ಎನ್ಎಸ್ಸಿ ಖರೀದಿಸಿದರೆ 5 ವರ್ಷಗಳಲ್ಲಿ 1389.49 ರೂಪಾಯಿ ಸಿಗುತ್ತದೆ. ಎನ್ಎಸ್ಸಿಯನ್ನು ಎಲ್ಲ ಬ್ಯಾಂಕ್ ಸ್ವೀಕರಿಸುತ್ತದೆ. ಅದನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಅದರ ಮೇಲೆ ಸಾಲ ತೆಗೆದುಕೊಳ್ಳಬಹುದು. ವಿವಿಧ ಬ್ಯಾಂಕುಗಳು ಸಾಲಗಳಿಗೆ ವಿವಿಧ ಬಡ್ಡಿ ದರಗಳನ್ನು ವಿಧಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇವುಗಳ ಮೇಲಿನ ಸಾಲಗಳಿಗೆ ಶೇಕಡಾ 11.9 ರ ದರದಲ್ಲಿ ಬಡ್ಡಿ ವಿಧಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...