ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಡಿ ಪರಿಶಿಷ್ಟ ಪಂಗಡದವರು ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಜನಾಂಗದ ಅರ್ಹ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.20 ಆಗಿರುತ್ತದೆ.
ಯೋಜನೆಗಳು:
ನೇರಸಾಲ ಯೋಜನೆ-ಘಟಕವೆಚ್ಚ 1 ಲಕ್ಷ ರೂ.ಇದರಲ್ಲಿ ಶೇ.50ರಷ್ಟು ನಿಗಮದಿಂದ ಸಾಲ ಮತ್ತು ಶೇ.50 ಸಹಾಯಧನ ನೀಡಲಾಗುವುದು.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-ಇ.ವಿ. ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ(ಇ-ಕಾಮರ್ಸ್‍ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ 50 ಸಾವಿರ ರೂ. ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ, ಐ.ಎಸ್.ಬಿ ಹಾಗೂ ಇತರೆ ಚಟುವಟಿಕೆಗಳಿಗಾಗಿ ಸಹಾಯಧನ: ಗರಿಷ್ಟ 2 ಲಕ್ಷ ರೂ, ಉಳಿದ ಮೊತ್ತ ಬ್ಯಾಂಕ್‍ನಿಂದ ಸಾಲ, ಸರಕು ಸಾಗಾಣಿಕೆ ವಾಹನ: ಗರಿಷ್ಟ 3.50 ಲಕ್ಷ ರೂ,, ಉಳಿದ ಮೊತ್ತ ಬ್ಯಾಂಕ್‍ನಿಂದ ಸಾಲ.
ಪ್ರೇರಣಾ(ಮೈಕ್ರೋಕ್ರೆಡಿಟ್) ಯೋಜನೆ: ಕನಿಷ್ಟ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಗರಿಷ್ಟ 2.50 ಲಕ್ಷ ರೂ, ಇದರಲ್ಲಿ 1.50 ಲಕ್ಷ ರೂ. ಸಹಾಯಧನ ಮತ್ತು 1 ಲಕ್ಷ ರೂ. ನಿಗಮದಿಂದ ಸಾಲ ಒದಗಿಸಲಾಗುವುದು.
ಭೂ ಒಡೆತನ ಯೋಜನೆ: ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಟ 0.20 ಎಕರೆ ಮೇಲ್ಪಟ್ಟು ಘಟಕವೆಚ್ಚದಲ್ಲಿ ಗರಿಷ್ಟ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ ಕೊಡಲಾಗುವುದು.
ಗಂಗಾ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ/ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ನಗರದ ಕಂಟೋನ್‍ಮೆಂಟ್‍ನ ತಿಲಕನಗರದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(ನಿ)ದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ದೂ.08392-245551 ಗೆ ಸಂಪರ್ಕಿಸಬಹುದು ಎಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.