alex Certify ಮತ್ತೆ 578 ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ 578 ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಆರಂಭ

ಬೆಂಗಳೂರು: ಇತ್ತೀಚೆಗಷ್ಟೇ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1008 ಪ್ರಾಥಮಿಕ ಶಾಲೆಗಳಲ್ಲಿ ನರ್ಸರಿ ತರಗತಿ ಆರಂಭಿಸಲು ಅನುಮತಿ ನೀಡಿದ್ದ ಸರ್ಕಾರ ಮತ್ತೆ 578 ನರ್ಸರಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ.

ರಾಜ್ಯದ 578 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ನರ್ಸರಿ ತರಗತಿಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. 2024 -25ನೇ ಶೈಕ್ಷಣಿಕ ಸಾಲಿನಿಂದಲೇ 578 ನರ್ಸರಿ ತರಗತಿ ಆರಂಭಿಸಬೇಕಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ನರ್ಸರಿ ತರಗತಿ ಆರಂಭದ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಬೇಕು. ಎಲ್ಕೆಜಿಗೆ ನಾಲ್ಕು ವರ್ಷದಿಂದ ಐದು ವರ್ಷ ವಯೋಮಿತಿಯ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ನರ್ಸರಿ ಪ್ರಾರಂಭಿಸಲು ಕನಿಷ್ಠ 20 ಮಕ್ಕಳು ಗರಿಷ್ಠ 30 ಮಕ್ಕಳನ್ನು ದಾಖಲಿಸಿಕೊಳ್ಳಬಹುದು. ಇದಕ್ಕೆ ಅಗತ್ಯ ಕೊಠಡಿ ಗುರುತಿಸಿ ಸ್ಥಳೀಯ ಚಿತ್ರಕಲಾ ಶಿಕ್ಷಕರು, ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಕೊಠಡಿಯನ್ನು ಸಜ್ಜುಗೊಳಿಸಬೇಕು.

ಪ್ರತಿ ತರಗತಿಗೆ ಒಬ್ಬ ಅತಿಥಿ ಶಿಕ್ಷಕರು, ಆಯಾ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಕಿದ್ದು, ಅತಿಥಿ ಶಿಕ್ಷಕರಿಗೆ 10 ಸಾವಿರ ರೂ., ಆಯಾಗಳಿಗೆ 5 ಸಾವಿರ ರೂ. ಸಂಭಾವನೆ ನಿಗದಿಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:30ರ ವರೆಗೆ ಶಾಲೆ ನಡೆಸಬೇಕು. ಮಕ್ಕಳಿಗೆ ಅಂಗನವಾಡಿಗಳಂತೆ ಹಾಲು, ಉಪಹಾರ, ಊಟ ನೀಡಬೇಕು ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...