ಬೆಂಗಳೂರು : ಬೆಂಗಳೂರಿನಲ್ಲಿ ಯೋಗ ಟೀಚರ್ ಕಿಡ್ನ್ಯಾಪ್ ಕೇಸ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೌದು. ಯೋಗ ಶಿಕ್ಷಕಿಯನ್ನು ಬೆಂಗಳೂರಿನಿಂದ ಅಪಹರಿಸಿ ಅರಬೆತ್ತಲೆಗೊಳಿಸಿ ಜೀವಂತವಾಗಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದಿಬ್ಬೂರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ವಿಚಾರಣೆ ವೇಳೆ ಹಲವು ಮಾಹಿತಿಗಳು ಲಭ್ಯವಾಗಿದೆ.
ಅಕ್ಟೋಬರ್ 23ರಂದು ಯೋಗ ಶಿಕ್ಷಕಿ ಅಪಹರಣಕ್ಕೆ ಒಳಗಾಗಿದ್ದರು, ಯೋಗ ಶಿಕ್ಷಕಿ ಪ್ರಿಯಕರ ಸಂತೋಷ್ ಪತ್ನಿಯೇ ಸುಪಾರಿ ನೀಡಿದ್ದಳು ಎಂದು ತಿಳಿದು ಬಂದಿದೆ. ಸಂತೋಷ ಜೊತೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿದ್ದರು. ಶಿಕ್ಷಕಿ ಹತ್ಯೆಗೆ ಸಂತೋಷ್ ಕುಮಾರ್ ಪತ್ನಿ ಸುಪಾರಿ ನೀಡಿದ್ದಾರೆ. ಮದುವೆಯಾಗಿ ಗಂಡನಿಂದ ಪ್ರತ್ಯೇಕವಾಗಿ ಯೋಗ ಶಿಕ್ಷಕಿ ವಾಸ ಮಾಡುತ್ತಿದ್ದರು.
ಸಂತೋಷ್ ಪತ್ನಿ ಹೇಳಿದಂತೆ ಯೋಗ ಟೀಚರ್ ಕಿಡ್ನ್ಯಾಪ್ ಮಾಡಿ ಅರೆಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ ನಡೆಸಲಾಗಿದೆ. . ಆದರೆ ಶಿಕ್ಷಕಿ ಒಪ್ಪದಿದ್ದಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ಸತ್ತಂತೆ ನಟಿಸಿದ ಟೀಚರ್ ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದಾರೆ. ನಂತರ ಅವರು ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕೊಲೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನ ಸೇರಿ ಹಲವು ಪ್ರಕರಣಗಳ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಡಿಟೆಕ್ಟಿವ್ ಏಜೆನ್ಸಿ ಮಾಲಿಕ ಸತೀಶ್ ರೆಡ್ಡಿ, ರಮಣ, ಸಲ್ಮಾನ್, ರವಿ ಬಂಧಿತ ಆರೋಪಿಗಳಾಗಿದ್ದಾರೆ. ಮೂಲತಃ ದೇವನಹಳ್ಳಿ ತಾಲೂಕಿನವರಾದ ಯೋಗ ಶಿಕ್ಷಕಿ ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿದ್ದರು.