
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿ ಕಾವೇರತೊಡಗಿದೆ. ರಾಜಕೀಯ ನಾಯಕರುಗಳು ಆರೋಪ – ಪ್ರತ್ಯಾರೋಪಗಳನ್ನು ಮಾಡಿಕೊಂಡು ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಇದರ ಮಧ್ಯೆ ನ್ಯೂಸ್ ಚಾನೆಲ್ ಗಳಲ್ಲೂ ಸಹ ಚರ್ಚೆಗಳನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುತ್ತಿರುವ ವಕ್ತಾರರು ತಾವು ಪ್ರತಿನಿಧಿಸುತ್ತಿರುವ ಪಕ್ಷಗಳ ಪರ ಬ್ಯಾಟಿಂಗ್ ಮಾಡುತ್ತಿರುವುದಲ್ಲದೆ, ಎದುರಾಳಿಗಳ ಪಕ್ಷವನ್ನು ಹೀಗಳೆದು ಮಾತನಾಡುತ್ತಿದ್ದಾರೆ. ಇದೇ ರೀತಿ ನ್ಯೂಸ್ ಚಾನೆಲ್ ಒಂದರಲ್ಲಿ ನಡೆದ ಚರ್ಚೆ ಅನಿರೀಕ್ಷಿತ ತಿರುವು ಪಡೆದು ಮಾರಾಮಾರಿಗೆ ಕಾರಣವಾಗಿದೆ.
ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು ‘ಕೌನ್ ಬನೇಗಾ ಆಂಧ್ರ ಸಿಎಂ’ ಎಂಬ ಕಾರ್ಯಕ್ರಮ ನ್ಯೂಸ್ ಚಾನೆಲ್ ನಲ್ಲಿ ನಡೆಯುತ್ತಿದ್ದಾಗ ಜನ ಸೇನಾ ಬೆಂಬಲಿಗ ವಿಷ್ಣು ನಾಗಿರೆಡ್ಡಿ ಹಾಗೂ ವೈಸಿಪಿ ವಿಶ್ಲೇಷಕ ಚಿಂತಾ ರಾಜಶೇಖರ ಹೊಡೆದಾಡಿಕೊಂಡಿದ್ದಾರೆ. ಲೈವ್ ಕಾರ್ಯಕ್ರಮದಲ್ಲೇ ಈ ಶಾಕಿಂಗ್ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು ‘ಕೌನ್ ಬನೇಗಾ ಆಂಧ್ರ ಸಿಎಂ’ ಎಂಬ ಕಾರ್ಯಕ್ರಮ ನ್ಯೂಸ್ ಚಾನೆಲ್ ನಲ್ಲಿ ನಡೆಯುತ್ತಿದ್ದಾಗ ಜನ ಸೇನಾ ಬೆಂಬಲಿಗ ವಿಷ್ಣು ನಾಗಿರೆಡ್ಡಿ ಹಾಗೂ ವೈಸಿಪಿ ವಿಶ್ಲೇಷಕ ಚಿಂತಾ ರಾಜಶೇಖರ ಹೊಡೆದಾಡಿಕೊಂಡಿದ್ದಾರೆ. ಲೈವ್ ಕಾರ್ಯಕ್ರಮದಲ್ಲೇ ಈ ಶಾಕಿಂಗ್ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.