alex Certify ತಂದೆಯಿಂದ ನಾಯಿ ಮರಿ ಗಿಫ್ಟ್ ಪಡೆದ ಮಗು ಭಾವುಕನಾಗಿದ್ದು ಹೀಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯಿಂದ ನಾಯಿ ಮರಿ ಗಿಫ್ಟ್ ಪಡೆದ ಮಗು ಭಾವುಕನಾಗಿದ್ದು ಹೀಗೆ

ತನ್ನ ತಂದೆಯಿಂದ ನಾಯಿಮರಿಯನ್ನು ಉಡುಗೊರೆಯಾಗಿ ಪಡೆದ ಬಾಲಕ ಭಾವುಕನಾಗಿ ಕಣ್ಣೀರು ಹಾಕುವ ವಿಡಿಯೋ ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ.

ಗುಡ್​ ನ್ಯೂಸ್​ ಮೂವ್​ಮೆಂಟ್​ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ ಕ್ಲಿಪ್​ನಲ್ಲಿ ಆ ಬಾಲಕ ಸೋಫಾದ ಮೇಲೆ ಕಣ್ಣು ಮುಚ್ಚಿ ಕುಳಿತು ಸಪ್ರೈಸ್​ಗಾಗಿ ಕುಳಿತಿರುವಲ್ಲಿಂದ ಆರಂಭವಾಗುತ್ತದೆ, ಆ ಹುಡುಗನು ತನ್ನ ತಂದೆ ನಾಯಿಮರಿಯನ್ನು ನೀಡುತ್ತಿದ್ದಂತೆ ಅವನ ಮುಖದಲ್ಲಿ ಖುಷಿ ಕಾಣಿಸುತ್ತದೆ. ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳಲು ಆತನಿಗೆ ಸಾಧ್ಯವಾಗುವುದಿಲ್ಲ, ಅದು ನಿಜವಾದ ನಾಯಿಯೇ ಎಂದು ಖಚಿತಪಡಿಸಿಕೊಳ್ಳಲು ನಾಯಿಮರಿಯ ಮುಖವನ್ನು ಸಹ ಮುಟ್ಟುತ್ತಾನೆ.

ನಾಯಿಮರಿಯನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು, ಮುದ್ದು ಮಾಡುತ್ತಾನೆ. ತನ್ನ ಭಾವನೆಗಳನ್ನು ಹಿಂತಿರುಗಿಸಲು ಸಾಧ್ಯವಾಗದೇ ಸಂತೋಷದಿಂದ ಕಣ್ಣೀರು ಹಾಕುತ್ತಾನೆ. ತಂದೆ ಅವನನ್ನು ತಬ್ಬಿಕೊಂಡು ಮಗನ ಭಾವನೆಗಳನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ.

ಮುದ್ದಾದ ಸಾಕುಪ್ರಾಣಿಗಳು ಪ್ರತಿ ಮನೆಯಲ್ಲೂ ಸಂತೋಷವನ್ನು ತರಬಹುದು, ಪ್ರಾಣಿಗಳನ್ನು ದತ್ತು ಪಡೆದು ರಕ್ಷಿಸಬಹುದು ಎಂದು ನೆಟ್ಟಿಗರು ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...