
ಪುಟ್ಟ ಬಾಲಕಿಯೊಬ್ಬಳು ಕೋಣೆಗೆ ಎಂಟ್ರಿ ಕೊಟ್ಟಾಗ ವಧುವಿನಂತೆ ಕಂಗೊಳಿಸುತ್ತಿದ್ದ ತನ್ನ ತಾಯಿಯನ್ನು ನೋಡಿ ಖುಷಿಪಟ್ಟಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದಿದೆ.
ಮೇಕಪ್ ಕಲಾವಿದೆ ಅಂಜಲಿ ಮಂಚಂದ ಅವರು ಅರ್ಜುನ್ ಕಕ್ಕರ್ ಅವರೊಂದಿಗೆ ಇತ್ತೀಚೆಗೆ ವಿವಾಹವಾಗಿದ್ದಾರೆ. ವಧುವಿನ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಬಾಲಕಿ ಫುಲ್ ಖುಷಿಯಾಗಿದ್ದಾಳೆ. ಗುಲಾಬಿ ಬಣ್ಣದ ಲೆಹೆಂಗಾ ಮತ್ತು ಭಾರಿ ಆಭರಣಗಳನ್ನು ಧರಿಸಿ ವಧು ಕೂತಿದ್ದರೆ, ಅಲ್ಲಿಗೆ ಎಂಟ್ರಿ ಕೊಟ್ಟ ಪುಟ್ಟ ಮಗಳು ಸುಂದರವಾಗಿರುವ ತಾಯಿಯನ್ನು ನೋಡಿ ನಗೆಬೀರಿದ್ದಾಳೆ. ಬಳಿಕ ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಎಂದು ತಾಯಿಯನ್ನು ಹೊಗಳಿದ್ದಾಳೆ.
ಮೇಕಪ್ ಕಲಾವಿದ ಗುನೀತ್ ವಿರ್ಡಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ. ಬಾಲಕಿಯ ಮುದ್ದು ಮುದ್ದು ಮಾತಿಗೆ ನೆಟ್ಟಿಗರು ಮನಸೋತಿದ್ದಾರೆ.
https://www.youtube.com/watch?v=F3YNp19IVM4&feature=youtu.be
