ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ತಂಪು ಪಾನೀಯವನ್ನು ಸೇವಿಸಿದ್ದು, ಆಕೆ ನೀಡಿರುವ ಪ್ರತಿಕ್ರಿಯೆಯ ವಿಡಿಯೋ ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ ಮೊದಲ ಬಾರಿಗೆ ಕೋಕಾ-ಕೋಲಾ ರುಚಿ ನೋಡಿದ್ದಾಳೆ. ಅವಳ ಪ್ರತಿಕ್ರಿಯೆ ಬಹಳ ಅಮೂಲ್ಯವಾಗಿದೆ. ಬ್ಯುಟೆಂಗೆಬೀಡೆನ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋವನ್ನು 41,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಪುಟ್ಟ ಬಾಲೆ ತನ್ನ ಹೆತ್ತವರೊಂದಿಗೆ ರೆಸ್ಟೋರೆಂಟ್ ಗೆ ತೆರಳಿದ್ದಾಳೆ. ಅಲ್ಲಿ ಆಕೆಗೆ ಮೊದಲ ಬಾರಿಗೆ ಕೋಕಾಕೋಲಾ ತಂಪು ಪಾನೀಯವನ್ನು ನೀಡಲಾಗಿದೆ. ಸ್ಟ್ರಾ ಸಹಾಯದಿಂದ ಬಹಳ ಖುಷಿಯಿಂದಲೇ ಪಾನೀಯ ಸೇವಿಸಿದ್ದಾಳೆ. ಅದನ್ನು ಕುಡಿದಾಗ ಆಕೆಗೆ ಆದ ಅನುಭವದ ದೃಶ್ಯ ನೋಡುಗರಿಗೆ ನಗು ತರಿಸಿದೆ.
ಕೋಕಾಕೋಲಾ ಸೇವಿಸಿದ ಕೂಡಲೇ ಮುಖವನ್ನು ಸಿಂಡರಿಸಿದ ಬಾಲೆ, ಕೆಲ ಹೊತ್ತಿನ ನಂತರ ರುಚಿಯನ್ನು ಗ್ರಹಿಸಿದ್ದು ಮತ್ತೆ ಕುಡಿಯುತ್ತಾಳೆ. ಹೀಗಾಗಿ ಪಾನೀಯವನ್ನು ಆಕೆ ಇಷ್ಟಪಟ್ಟಿದ್ದಾಳೆ ಎಂಬುದನ್ನು ಸಾಬೀತುಪಡಿಸಿದ್ದಾಳೆ.
https://twitter.com/buitengebieden_/status/1472553103950024712?ref_src=twsrc%5Etfw%7Ctwcamp%5Etweetembed%7Ctwterm%5E1472553103950024712%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-tastes-coca-cola-for-the-first-time-her-reaction-is-now-a-viral-video-1890466-2021-12-21