ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ 26-01-2022 11:36AM IST / No Comments / Posted In: India, Featured News, Live News, Entertainment ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, ಓದಿಸಲು, ಬದುಕು ಕಲಿಸಲು ಪಡುವ ಕಷ್ಟಕ್ಕೆ ನಾವು ಪ್ರತಿದಿನ ಧನ್ಯವಾದ ಸಲ್ಲಿಸಿದರು ಸಾಕಾಗುವುದಿಲ್ಲ. ಇಷ್ಟೆಲ್ಲಾ ನಮಗೆ ಗೊತ್ತಿದ್ದರು ಯಾವತ್ತು ಅವರ ಬಳಿ ಹೋಗಿ ಅವರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿಲ್ಲ. ಆದರೆ ಇಲ್ಲೊಬ್ಬ ಶಾಲೆಯ ಬಾಲಕಿ ತನ್ನ ಹೆತ್ತವರಿಗೆ ಸಿಹಿಯಾದ ರೀತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ. ಉತ್ತರ ಪ್ರದೇಶದ ಭಟ್ವಾಲಿಯಾ ಗ್ರಾಮದ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಭೋಜ್‌ಪುರಿ ಭಾಷೆಯ ಭಾವಪೂರ್ಣ ಹಾಡೊಂದನ್ನು ಹಾಡಿ ತನ್ನ ಹೆತ್ತವರಿಗೆ ತನ್ನ ಹಾಡನ್ನು ಸಮರ್ಪಿಸಿದ್ದಾಳೆ. ಹೆತ್ತವರು ಮಾಡುವ ತ್ಯಾಗ ಮತ್ತು ಅವರ ಋಣವನ್ನ ಎಂದಿಗೂ ತೀರಿಸಲಾಗುವುದಿಲ್ಲ. ಹೆತ್ತವರ ಋಣವನ್ನ ಮರುಪಾವತಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಬಾಲಕಿ ಭಾವನಾತ್ಮಕವಾಗಿ ಹಾಡಿರುವ ವಿಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹೃದಯಸ್ಪರ್ಶಿ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ವೀಡಿಯೊಗೆ 1.47 ಲಕ್ಷ ವೀಕ್ಷಣೆಗಳು ದೊರೆತಿದ್ದು, 2200 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಆಕೆಯ ಧ್ವನಿಗೆ ಯಾವುದೇ ಹಿನ್ನೆಲೆ ಸಂಗೀತದ ಅಗತ್ಯವಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಲಾಲಿಪಾಪ್ ಲಗೇಲು’ ವೇ ಟು ಗೋ ಗರ್ಲ್ ಮಾತ್ರ ಭೋಜ್‌ಪುರಿ ಹಾಡುಗಳು ‘ ಎಂದು ಭಾವಿಸುವವರಿಗೆ ಇದು ಸೂಕ್ತ ಉತ್ತರವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ನಮ್ಮನ್ನು ಭೂಮಿಯ ಮೇಲೆ ಹೆತ್ತವರಿಗಿಂತ ಹೆಚ್ಚು ಬೇರೊಬ್ಬರು ಪ್ರೀತಿಸಲು ಸಾಧ್ಯವಿಲ್ಲ ಎಂಬ ಭಾವಮಾತ್ಮಕ ಕಾಮೆಂಟ್ ಗಳು ವ್ಯಕ್ತವಾಗಿವೆ. ‘माँ-बाप’ का क़र्ज़ कभी चुकाया नहीं जा सकता. भोजपुरी में भावपूर्ण प्रस्तुति.❤️ pic.twitter.com/MtSPpoZJ2Z — Awanish Sharan 🇮🇳 (@AwanishSharan) January 23, 2022