ಆಕೆ ಮುದ್ದು ಮುದ್ದಾಗಿರೋ ಹುಡುಗಿ, ಆಕೆಯ ವಯಸ್ಸು ಅಬ್ಬಬ್ಬಾ ಅಂದ್ರೆ 2 ಅಥವಾ 3 ಇರಬೇಕು ಅಷ್ಟೆ.
ನೋಡೋದಕ್ಕೆ ಥೇಟ್ ಗೊಂಬೆ. ಆಕೆಯನ್ನ ನೋಡಿದ್ರೆ ಸಾಕು ಎಂಥವರಿಗೂ ಮುದ್ದು ಮಾಡಬೇಕು ಅಂತ ಅನ್ಸುತ್ತೆ. ಅಷ್ಟು ಕ್ಯೂಟಾಗಿರೋ ಆ ಪುಟಾಣಿಯ ಹೆತ್ತಮ್ಮ ಆಕೆಗೆ ಕೊಟ್ಟ ಉಡುಗೊರೆ ನೋಡ್ತಿದ್ರೆ ಎಂಥವರೂ ಕೂಡಾ ಬೆಚ್ಚಿಬೀಳ್ತಾರೆ. ಅಷ್ಟಕ್ಕೂ ಆ ಮಹಾತಾಯಿ ತನ್ನ ಮಗಳಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ ದೆವ್ವದಂತೆ ಕಾಣಿಸೋ ಗೊಂಬೆ.
ಅಮ್ಮ ಕೊಡಿಸಿದ ಗೊಂಬೆ ಅಂತ ಆ ಕಂದಮ್ಮ ಖುಷಿಯಿಂದ ಕವರ್ ಓಪನ್ ಆಡಿ ತೆಗೆದು ನೋಡ್ತಾಳೆ. ಆದರೆ ಆಕೆಯ ರಿಯಾಕ್ಷನ್ ಯಾರೂ ಕೂಡಾ ಅಂದಾಜು ಮಾಡೋದಕ್ಕೆ ಸಾಧ್ಯವೇ ಆಗದಿರೋ ಹಾಗಿತ್ತು. ಯಾಕಂದ್ರೆ ಅಮ್ಮ ಕೊಡಿಸಿದ ಗೊಂಬೆ ದೆವ್ವದಾಗಿದ್ದರೂ ಆಕೆ ಅದನ್ನ ನೋಡಿ ಹೆದರಲಿಲ್ಲ, ಬದಲಾಗಿ ಅದು ಮುದ್ದಾದ ಗೊಂಬೆ ಅಂತ ಖುಷಿಪಟ್ಟಳು. ಜೊತೆಗೆ ಆ ಗೊಂಬೆಯ ಕಣ್ಣು ಅತಿ ಸುಂದರವಾಗಿದೆ ಅಂತ ಹೊಗಳಿ ಅದರ ಜೊತೆ ಆಟ ಆಡಿದಳು.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಲಾಗಿರೋ ಈ ವಿಡಿಯೋವನ್ನ 1.5 ಮಿಲಿಯನ್ ಜನ ನೋಡಿ ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಮಕ್ಕಳ ಮನುಸ್ಸು ಎಷ್ಟು ಮುಗ್ಧ ಅನ್ನೊದಕ್ಕೆ ಸಾಕ್ಷಿಯಾಗಿದೆ.