ಚಿಕ್ಕಮಕ್ಕಳನ್ನು ಕಂಡಾಗ ತಮಾಷೆ ರೀತಿಯಲ್ಲಿ ಅವರನ್ನು ರೇಗಿಸುವುದು ಸಹಜ. ಅವರ ಕೈಯಲ್ಲಿದ್ದ ವಸ್ತು ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಅವರಿಗೆ ಏನಾದರೂ ಕೊಡುವ ಹಾಗೆ ಮಾಡಿ ಮಕ್ಕಳು ತೆಗೆದುಕೊಳ್ಳಲು ಬಂದಾಗ ಮೇಲಕ್ಕೆ ಹಾರಿಸುವುದು…… ಹೀಗೆ ಅನೇಕ ರೀತಿಯ ಹಾಸ್ಯಗಳನ್ನು ಮಾಡುತ್ತಿರುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಪುಟ್ಟ ಬಾಲಕಿ ಟರ್ಕಿಶ್ ಐಸ್ ಕ್ರೀಮ್ ಕೊಳ್ಳಲು ಬಂದಾಗ ಅವಳಿಗೆ ಅದನ್ನು ಕೊಡದೇ ರೇಗಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಾಲಕಿಯೊಬ್ಬಳು ಐಸ್ಕ್ರೀಂ ನೀಡುವಂತೆ ಅಂಗಡಿಯವನಿಗೆ ಕೇಳುತ್ತಾಳೆ. ಅಂಗಡಿಯಾತ ಟರ್ಕಿಶ್ ಐಸ್ಕ್ರೀಂ ಕೋನ್ ಅನ್ನು ಆಕೆಗೆ ನೀಡುತ್ತಾನೆ. ಆದರೆ ಅದನ್ನು ನೀಡುವುದಿಲ್ಲ.
ಅಂಗಡಿಯಾತ ಐಸ್ಕ್ರೀಂ ನೀಡಿದಂತೆ ಮಾಡಿ ಅದನ್ನು ತನ್ನ ಕೈಯಲ್ಲೇ ಇಟ್ಟುಕೊಳ್ಳುತ್ತಾನೆ. ಮತ್ತೆ ಮತ್ತೆ ಹೀಗೆ ಮಾಡಿದಾಗ ಬಾಲಕಿ ಕೋಪದಿಂದ ಕುದಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಸುತ್ತಲೂ ಇರುವವರು ತಮಾಷೆ ಮಾಡುತ್ತಿದ್ದರಿಂದ ಬಾಲಕಿ ಮತ್ತಷ್ಟು ಕೆರಳಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಈ ರೀತಿ ಚಿಕ್ಕಮಕ್ಕಳನ್ನು ಮಾಡುವುದು ಸರಿಯಲ್ಲ ಎಂದು ಹಲವರು ಹೇಳಿದ್ದರೆ, ಕೆಲವರು ಈ ವಿಡಿಯೋ ಅನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.
https://twitter.com/Cappuccino_O7/status/1595087012943777792?ref_src=twsrc%5Etfw%7Ctwcamp%5Etweetembed%7Ctwterm%5E1595087012943777792%7Ctwgr%5E84ebc5d7c70b9c7ebccbf138c4a704541225f2ae%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-girl-gets-furious-as-turkish-ice-cream-seller-plays-fun-trick-on-her-internet-has-mixed-reactions-2300696-2022-11-23