ತಂದೆ- ಮಗಳ ನಡುವಿನ ಬಾಂಧವ್ಯ ವಿವರಿಸಲಾಗದಷ್ಟು ಸುಂದರವಾಗಿರುತ್ತದೆ. ಈ ಬಾಂಧವ್ಯದಲ್ಲಿ ಮಗಳು ಎಷ್ಟು ದೊಡ್ಡವಳಾಗುತ್ತಾಳೆ ಎಂಬುದು ಮುಖ್ಯವಲ್ಲ, ಅವಳು ಯಾವಾಗಲೂ ತನ್ನ ತಂದೆಗೆ ಚಿಕ್ಕ ಹುಡುಗಿಯಾಗಿಯೇ ಕಾಣುತ್ತಾಳೆ.
ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಚಿತ್ರೀಕರಿಸಲಾದ ಸಣ್ಣ ವೀಡಿಯೊದಲ್ಲಿ ತಂದೆ- ಮಗಳ ನಡುವಿನ ಅಮೂಲ್ಯ ಕ್ಷಣ ಸೆರೆಯಾಗಿದೆ.
ಸಾಕ್ಷಿ ಮೆಹ್ರೋತ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೈಲಿನಲ್ಲಿ ಪುಟ್ಟ ಮಗು ತನ್ನ ತಂದೆಗೆ ಹಣ್ಣುಗಳನ್ನು ತಿನ್ನಿಸುತ್ತಿರುವುದನ್ನು ಕಾಣಬಹುದಾಗಿದೆ.
ರೈಲಿನಲ್ಲಿ ಸೀಟಿಲ್ಲದ್ದರಿಂದ ತಂದೆಯು ರೈಲಿನ ಬಾಗಿಲ ಬಳಿಯ ಪ್ಯಾಸೇಜ್‌ನಲ್ಲಿ ಕುಳಿತಿದ್ದು, ಮಗು ಅಲ್ಲೇ ಓಡಾಡಿಕೊಂಡು ಇರುವಂತೆ ಕಾಣಿಸುತ್ತದೆ.
ಈ ವಿಡಿಯೋ ನೋಡಿ ನೆಟ್ಟಿಗರ ಹೃದಯ ಬೆಚ್ಚಗಾಗಿದೆ. ಭಾವಾತ್ಮಕವಾಗಿ ಬಗೆಬಗೆಯ ಕಾಮೆಂಟ್ ಮಾಡಿ ಖುಷಿಪಟ್ಟಿದ್ದಾರೆ.