ಪುಟಾಣಿ ಬಾಲಕಿ ದೀಪಿಕಾ ಪಡುಕೋಣೆ ಅಭಿನಯದ ಬಾಜಿರಾವ್ ಮಸ್ತಾನಿ ಸಿನಿಮಾದ ದೀವಾನಿ ಮಸ್ತಾನಿ ಹಾಡಿಗೆ ನೃತ್ಯ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ ನೃತ್ಯ ಮಾಡಿದ ರೀತಿಯಲ್ಲಿಯೇ ಬಾಲಕಿ ನೃತ್ಯ ಮಾಡಿದ್ದಾಳೆ. ತಾನಿಯಾ & ಸೋನಿ ಹೆಸರಿನ ಫೇಸ್ಬುಕ್ , ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ಇದೇ ಖಾತೆಯಲ್ಲಿ ಶೇರ್ ಮಾಡಲಾದ ಇತರೆ ವಿಡಿಯೋಗಳಲ್ಲಿ ತಾನಿಯಾ ತಾಯಿ ಸೋನಿ ಕೂಡ ಆಕೆಯೊಂದಿಗೆ ನೃತ್ಯ ಮಾಡುವ ದೃಶ್ಯಗಳನ್ನು ನೋಡಬಹುದಾಗಿದೆ.
ಈ ವಿಡಿಯೋ ಬರೋಬ್ಬರಿ 954000 ವೀವ್ಸ್ ಸಂಪಾದಿಸಿದೆ. ಸೆಪ್ಟೆಂಬರ್ 5ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು.
ಥೇಟ್ ದೀಪಿಕಾ ಪಡುಕೋಣೆಯ ಉಡುಗೆಯನ್ನು ಹೋಲುವಂತೆ ತಾನಿಯಾ ಕೂಡ ಬಂಗಾರ ಬಣ್ಣದ ಧಿರಿಸನ್ನು ಧರಿಸಿದ್ದಾಳೆ. ಒಂದೇ ಒಂದು ಹೆಜ್ಜೆಯನ್ನೂ ಮಿಸ್ ಮಾಡದೇ ತಾನಿಯಾ ದೀಪಿಕಾರಂತೆ ನೃತ್ಯ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
https://youtu.be/Agv7mK6J_Xs