ಪುಟ್ಟ ಬಾಲಕಿಯೊಬ್ಬಳು ಜೇಡದಂತೆ ಸರಸರನೇ ಹತ್ತಿ ಗೋಡೆ ಏರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಮಾರು 5 ವರ್ಷ ವಯಸ್ಸಿನ ಬಾಲಕಿ ಯಾವುದೇ ಬೆಂಬಲವಿಲ್ಲದೆ ನಿಮಿಷಗಳಲ್ಲಿ ಗೋಡೆ ಏರುವ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
BIG NEWS: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾ.ಅಮರಿಂದರ್ ಸಿಂಗ್ ರಾಜೀನಾಮೆ
ಹೌದು, ಬಾಲಕಿಯು ತನ್ನ ಕೈ ಹಾಗೂ ಕಾಲುಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಸರಾಗವಾಗಿ ಗೋಡೆ ಏರಿದ್ದಾಳೆ. ಅಷ್ಟೇ ಅಲ್ಲ ಯಾವುದೇ ಸುರಕ್ಷತಾ ಸಾಧನಗಳನ್ನು ಉಪಯೋಗಿಸದೆ ಈಕೆ ತನ್ನ ಮನೆಯ ಗೋಡೆಯೇರಿದ್ದು ಎಲ್ಲರನ್ನೂ ಚಕಿತಗೊಳಿಸಿದೆ.
ಕೋಣೆಯ ಮೂಲೆಯಲ್ಲಿ ಬೆನ್ನು ಹಿಂಬಾಗಿಸಿ ಗೋಡೆಯೇರಿದ ಬಾಲಕಿಯು ಮೇಲೆ ಏರಿದ ಕೂಡಲೇ ಕೈಯನ್ನು ಮಾತ್ರ ಹಿಡಿದುಕೊಂಡಿದ್ದಾಳೆ. ಕಾಲಿನಲ್ಲಿ ಆರಾಮವಾಗಿ ವ್ಯಾಯಾಮ ಮಾಡಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ʼಸ್ಪೈಡರ್ ಗರ್ಲ್ʼ ಎಂದು ಶೀರ್ಷಿಕೆ ನೀಡಲಾಗಿದೆ.
https://twitter.com/Ffs_OMG/status/1438278867211390980?ref_src=twsrc%5Etfw%7Ctwcamp%5Etweetembed%7Ctwterm%5E1438278867211390980%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-little-girl-climbs-walls-like-spider-man-amazing-talent-baffles-the-internet-watch-4963631%2F