ರಷ್ಯಾ-ಉಕ್ರೇನ್ ಬಿಕ್ಕಟ್ಟು ಯುದಧ ರೂಪತಾಳಿ ಸಾವುನೋವು ಸಂಭವಿಸುತ್ತಿರುವಂತೆ ಹಲವು ಜನರು ತಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲಿ ಮತ್ತು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಮಧ್ಯೆ ಯುದ್ಧವನ್ನು ನಿಲ್ಲಿಸುವಂತೆ ಕೇಳುವ ಪುಟ್ಟ ಹುಡುಗಿಯ ಭಾವುಕ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಬ್ರಿಟಾನಿ ಮತ್ತು ಲಿಲಿ ಎಂಬ ಪುಟದಿಂದ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು 1 ಮಿಲಿಯನ್ ವೀಕ್ಷಣೆಯಾಗಿದೆ.
ವಿಡಿಯೋದಲ್ಲಿ ಲಿಲಿ ಎಂಬ ಪುಟ್ಟ ಬಾಲಕಿ ಶಾಂತಿ ನೆಲೆಸುವಂತೆ ಮನವಿ ಮಾಡಿರುವುದು ಬಹಳ ಮನಸ್ಸು ಚುರುಕ್ ಎನ್ನುವಂತಿದೆ. ಮುದ್ದಾದ ಧ್ವನಿಯು ಪ್ರಬಲ ಸಂದೇಶ ನೀಡಿದ್ದು, ನೆಟ್ಟಿಗರು ಆಕೆಯ ಮಾತಿಗೆ ಬೆಂಬಲ ವ್ಯಕ್ತಪಡಿಸಿ ಅಭಿಪ್ರಾಯ ನೀಡಿದ್ದಾರೆ.
ನನಗೆ ಭೂಮಿಯ ಮೇಲೆ ಶಾಂತಿ ಬೇಕು, ಭೂಮಿಯ ತುಂಡುಗಳಲ್ಲ, ನಾವು ಸಹೋದರರು ಮತ್ತು ಸಹೋದರಿಯರು ಎಂಬ ಆಕೆಯ ಮಾತು ಮನಮುಟ್ಟುವಂತಿದೆ. ಯುದ್ಧವನ್ನು ನಿಲ್ಲಿಸಿ ಎಂದು ಆಕೆ ಅವಳು ಕೊನೆಯಲ್ಲಿ ಉತ್ಸಾಹದಿಂದ ಹೇಳಿದ್ದು ಗಂಭೀರವಾಗಿದೆ.