ಪುಟ್ಟ ಬಾಲಕಿಯೊಬ್ಬಳು ಚಾಕುವಿನ ಪದವನ್ನು ತಪ್ಪಾಗಿ ಉಚ್ಚರಿಸುವ ವಿಡಿಯೋ ವೈರಲ್ ಆಗಿದ್ದು, ಜನರು ಮುದ್ದು ಮಗು ಅಂದಿದ್ದಾರೆ.
ಚಾಕುವಿನ ಹಿಂದಿ ಪದವಾದ ಚಕ್ಕು ಹೇಳಲು ಸಾಧ್ಯವಾಗದೆ ಬಾಲಕಿ ಕಚ್ಚು ಎಂದು ಕರೆದಿದ್ದಾಳೆ. ಮೇಜಿನ ಮೇಲೆ ತರಕಾರಿಗಳ ಜೊತೆ ಚಾಕುವನ್ನು ಇರಿಸಲಾಗಿದೆ. ಮೇಜಿನ ಬಳಿ ಬಂದ ಬಾಲಕಿಯನ್ನು ಆಕೆಯ ತಾಯಿ ಇದೇನೆಂದು (ಚಾಕುವನ್ನು ತೋರಿಸುತ್ತಾ) ಹಿಂದಿಯಲ್ಲಿ ಕೇಳಿದ್ದಾರೆ. ಚಕ್ಕು ಎಂದು ಹೇಳುವ ಬದಲಾಗಿ ಆಕೆ ತಪ್ಪಾಗಿ ಕಚ್ಚು ಎಂದು ಉಚ್ಚರಿಸಿದ್ದಾಳೆ.
ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರನ್ನು ರಂಜಿಸಿದೆ. ಕಾಮೆಂಟ್ ವಿಭಾಗವು ಮುದ್ದಾದ ಪದಗಳಿಂದ ಮತ್ತು ಹೃದಯದ ಎಮೋಜಿಗಳಿಂದ ತುಂಬಿದೆ. ಇದೇ ರೀತಿಯಲ್ಲಿ ಪದಗಳನ್ನು ತಪ್ಪಾಗಿ ಉಚ್ಚರಿಸುವ ತಮ್ಮ ಮಕ್ಕಳ, ಒಡಹುಟ್ಟಿದವರ ಇದೇ ರೀತಿಯ ನಿದರ್ಶನಗಳನ್ನು ಅನೇಕರು ಹಂಚಿಕೊಂಡಿದ್ದಾರೆ.
ಬಳಕೆದಾರನೊಬ್ಬ, ಈ ಪುಟ್ಟ ಬಾಲೆಯ ವಿಡಿಯೋಗಳನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುವುದಾಗಿ ಹೇಳಿದ್ದಾನೆ. ತನ್ನ ಸಹೋದರ ಮೊಬೈಲ್ ಬದಲಿಗೆ ಲೊಬೈಲ್ ಎಂದು ಹೇಳುತ್ತಾನೆ ಅಂತಾ ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬರು, ತನ್ನ ಕಿರಿಯ ಸಹೋದರ ಚಪ್ಪಲ್ ಬದಲಿಗೆ ಪಚ್ಚಲ್ ಅಂತಾ ಹೇಳುತ್ತಾನೆ ಎಂದು ನಗೆಬೀರಿದ್ದಾರೆ.
https://www.youtube.com/watch?v=HSttR4bVIb8