ಜೀವನದ ಪ್ರತಿನಿತ್ಯದ ಹೋರಾಟಗಳನ್ನು ತಮ್ಮ ಮಕ್ಕಳಿಗೆ ತೋರಿಸದೇ ಮುದ್ದು ಮಾಡಿ ಸಾಕಿ ಸಲಹುವ ಪೋಷಕರ ವರ್ಗ ದಿನೇ ದಿನೇ ದೊಡ್ಡದಾಗುತ್ತಲೇ ಸಾಗಿದೆ. ಮಕ್ಕಳನ್ನು ಈ ರೀತಿ ಸಾಕುವುದರಿಂದ, ಜೀವನದಲ್ಲಿ ಬೇಕಾಗಿದ್ದೆಲ್ಲವನ್ನೂ ಕಷ್ಟ ಪಡದೇ ಪಡೆಯಬೇಕೆಂಬ ಮನಸ್ಥಿತಿ ಮಕ್ಕಳಲ್ಲಿ ಹೆಚ್ಚುತ್ತಲೂ ಇದೆ.
ಆದರೆ ಇದೇ ಜಗತ್ತಿನ ಮತ್ತೊಂದು ವಾಸ್ತವವೇನೆಂದರೆ, ಬಡ ವರ್ಗದ ಜನರು ತಮ್ಮ ಕುಟುಂಬಗಳಿಗೆ ಒಪ್ಪೊತ್ತಿನ ಊಟ ಸಿಗುವಂತೆ ಮಾಡಲು ಏನೆಲ್ಲಾ ಕಷ್ಟ ಪಡುತ್ತಾರೆ ಎಂಬುದನ್ನು ನೋಡಿಕೊಂಡೇ ಬೆಳೆಯುವ ಮಕ್ಕಳೂ ಇದ್ದಾರೆ. ಇದೇ ಮಕ್ಕಳು ತಮ್ಮ ಅಪ್ಪ-ಅಮ್ಮಂದಿರು ಪ್ರತಿನಿತ್ಯದ ಜೀವನದಲ್ಲಿ ಪಡುವ ಪಾಡಿನ ಹೊರೆಯನ್ನು ತಾವೂ ಹಂಚಿಕೊಂಡು ಹೊರಲು ಸಹಜವಾಗಿಯೇ ಸಜ್ಜಾಗುತ್ತಾರೆ.
ಅಂಥದ್ದೇ ಬಾಲಕನೊಬ್ಬ ಮೀನು ಹಿಡಿಯಲು ತೆರಳಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಭಾರೀ ತಾಳ್ಮೆಯಿಂದ ಮೀನಿನ ಗಾಳವನ್ನು ಸಿದ್ಧಪಡಿಸುವ ಬಾಲಕ, ಮೀನುಗಳು ಗಾಳಕ್ಕೆ ಹಾಕಿರುವ ಹಿಟ್ಟನ್ನು ಹಿಡಿಲು ಬರುವವರೆಗೂ ಅಲರ್ಟ್ ಆಗಿ ಕಾಯುತ್ತಾ ಕುಳಿತು, ಬಳಿಕ ಮೀನುಗಳನ್ನು ದಡಕ್ಕೆ ಎಳೆಯುವುದನ್ನು ಕಂಡ ನೆಟ್ಟಿಗರ ಆತನ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
https://twitter.com/Figensport/status/1651719119933435904?ref_src=twsrc%5Etfw%7Ctwcamp%5Etweetembed%7Ctwterm%5E1651719119933435904%7Ctwgr%5Edb2e4f971a724e8ec5c562982e834fbdc2a75aa3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boys-technique-of-catching-fish-has-bowled-the-internet-over-video-is-viral-2366237-2023-04-29