
ಜೈನಿಲ್ ಬತ್ಯಾಲ್ ಎಂಬ ಬಾಲಕ ಅದ್ನಾನ್ ಸಾಮಿ ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ತೇರಾ ಚೆಹ್ರಾವನ್ನು ಹಾಡುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಾಲಕನ ಭಾವಪೂರ್ಣ ಧ್ವನಿಯು ಬಹಳಷ್ಟು ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಂಗೀತ ರಸಿಕರಿಂದ ಮೆಚ್ಚುಗೆಯನ್ನು ಗಳಿಸಿದೆ. ಕಳೆದ ತಿಂಗಳು ಹಂಚಿಕೊಂಡ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಅಂದಹಾಗೆ, ಬಾಲಕ ಜೈನಿಲ್ ಕಳೆದ ವರ್ಷ ಗುಲಾಬಿ ಆಂಖೇನ್ ಹಾಡುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಬಾಲಕನ ಭಾವಪೂರ್ಣ ಹಾಡು ನೆಟ್ಟಿಗರ ಮನಗೆದ್ದಿದೆ. ಬಾಲಕ ಹಾಡುತ್ತಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಲೆಂದೇ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಹಲವಾರು ಹಾಡಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ವಿಡಿಯೋದಲ್ಲಿ ಜೈನಿಲ್, ರಾಣಿ ಮುಖರ್ಜಿ ಮತ್ತು ಅದ್ನಾನ್ ಸಾಮಿ ಅವರ ಮೇಲೆ ಚಿತ್ರಿಸಿದ ಈ ಹಾಡನ್ನು ಹಾಡುತ್ತಾ ಪಿಯಾನೋ ನುಡಿಸಿದ್ದಾರೆ. ಬಾಲಕನ ಧ್ವನಿಯು ನೆಟ್ಟಿಗರ ಮಂತ್ರಮುಗ್ಧಗೊಳಿಸಿದೆ. ಬಳಕೆದಾರರು ಹೃದಯಪೂರ್ವಕವಾಗಿ ಬಾಲಕನನ್ನು ಹಾರೈಸಿದ್ದಾರೆ.
https://youtu.be/WNDJ30rr4NM