alex Certify ಮನ ಮುದಗೊಳಿಸುತ್ತೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಪುಟ್ಟ ಬಾಲಕರ ಮೊಗದಲ್ಲಿ ಮೂಡಿದ ಮುಗ್ಧ ನಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮುದಗೊಳಿಸುತ್ತೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಪುಟ್ಟ ಬಾಲಕರ ಮೊಗದಲ್ಲಿ ಮೂಡಿದ ಮುಗ್ಧ ನಗು

ಕರುಣಾಮಯಿ ಜನರು ಮನುಕುಲಕ್ಕೆ ದೇವರು ಕೊಟ್ಟ ವರವೆಂದು ಹೇಳಬಹುದು. ಈ ಮಾತನ್ನು ಸಾರಿ ಹೇಳುವ ವಿಡಿಯೋವೊಂದು ವೈರಲ್ ಆಗಿದೆ.

ಬೀದಿಗಳಲ್ಲಿ ಸಿಂಗಾರದ ವಸ್ತುಗಳನ್ನು ಮಾರುತ್ತಿದ್ದ ಪುಟ್ಟ ಬಾಲಕರಿಬ್ಬರಿಗೆ ಅಪರಿಚಿತ ಗ್ರಾಹಕರೊಬ್ಬರು ಸಿಹಿಯಾದ ಅಚ್ಚರಿಯೊಂದನ್ನು ಕೊಟ್ಟ ಘಟನೆಯ ವಿಡಿಯೋ ಇದಾಗಿದೆ.

ಚೀಸ್ ಅಡಿಕ್ಟ್ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾದ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಬಾಲಕರಿಬ್ಬರು ಕೃತಕ ಆಭರಣಗಳಿದ್ದ ಟ್ರೇಗಳನ್ನು ತಮ್ಮ ಕುತ್ತಿಗೆಗೆ ನೇತು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದು, ಅವರಿಗೆ ಬ್ಲಾಗರ್‌‌ ಚಾಕೊಲೇಟ್‌ ಕೊಡುತ್ತಲೇ ಅವರ ಮೊಗದಲ್ಲಿ ಸಂತಸ ಮೂಡಿರುವುದನ್ನು ನೋಡಬಹುದಾಗಿದೆ.

ಅನಿರೀಕ್ಷಿತವಾದ ಈ ಸಿಹಿ ಉಡುಗೊರೆಯನ್ನು ಪಡೆದ ಬಾಲಕರಿಬ್ಬರ ಮೊಗದಲ್ಲಿ ಕಾಣುವ ಮುಗ್ಧವಾದ ಸಂತಸದ ಭಾವ ನೋಡುವುದೇ ಒಂದು ಆನಂದ.

“ಎಂದೂ ಸಹ ಇಷ್ಟು ಖುಷಿಯಾಗಿರಲಿಲ್ಲ. ಏನಾದರೊಂದು ಒಳ್ಳೆಯ ಕೆಲಸ ಮಾಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಅದು ದೊಡ್ಡದಿರಲಿ, ಚಿಕ್ಕದಿರಲಿ, ಪ್ರತಿದಿನ ಏನಾದರೂಂದು ಒಳ್ಳೆಯದು ಅಷ್ಟೇ – ಯಾರಾದರೊಬ್ಬರ ಮೊಗದಲ್ಲಿ ನಗು ಮೂಡುವಂತೆ ಮಾಡಿ,” ಎಂದು ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ತಿಳಿಸಲಾಗಿದೆ.

https://www.youtube.com/watch?v=RTUF07-nM8k

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...