alex Certify ವೀರ ಯೋಧರಿಗೆ ಪುಟಾಣಿಗಳ ಪ್ರೀತಿಯ ಸೆಲ್ಯೂಟ್; ಮಕ್ಕಳ ಈ ನಡೆಗೆ ನೆಟ್ಟಿಗರು ಫುಲ್ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀರ ಯೋಧರಿಗೆ ಪುಟಾಣಿಗಳ ಪ್ರೀತಿಯ ಸೆಲ್ಯೂಟ್; ಮಕ್ಕಳ ಈ ನಡೆಗೆ ನೆಟ್ಟಿಗರು ಫುಲ್ ಫಿದಾ

ಯೋಧರು ನಮ್ಮ ದೇಶದ ಹೆಮ್ಮೆ. ಈ ದೇಶದ ಆಸ್ತಿ. ನಾವೇನಾದರೂ ಇಂದು ನೆಮ್ಮದಿಯಿಂದ, ಶತ್ರುಗಳ ಭಯವೇ ಇಲ್ಲದೇ ದಿನ ಕಳೆಯುತ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಯೋಧರು.

ದೇಶಕ್ಕಾಗಿ, ಹಾಗೂ ನಮ್ಮ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿರೋ ಯೋಧರ ಜೊತೆ ಪ್ರತಿ ಭಾರತೀಯನೂ ಭಾವನಾತ್ಮಕವಾಗಿ ಸಂಬಂಧ ಹೊಂದಿರುತ್ತಾನೆ. ನೀವೆಲ್ಲ ಗಮನಿಸಿದ್ದಿರೋ ಇಲ್ವೋ ಎಲ್ಲಾದರೂ ಯೋಧರು ಕಂಡರೆ ಸಾಕು ನಮಗೇನೇ ಗೊತ್ತಿಲ್ಲದಂತೆ ನಾವು ಅವರನ್ನ ಗೌರವ ಅಷ್ಟೇ ಪ್ರೀತಿಯಿಂದ ನೋಡಿರುತ್ತೇವೆ. ಇತ್ತೀಚೆಗೆ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ಅದೊಂದು ಹೃದಯಸ್ಪರ್ಶಿ ವಿಡಿಯೋ. ಮುದ್ದು ಮುದ್ದಾಗಿರೋ ಮಕ್ಕಳಿಬ್ಬರು ಪ್ರೀತಿಯಿಂದ ಸೇನಾ ಅಧಿಕಾರಿಗಳನ್ನ ಕಂಡಾಕ್ಷಣ ಗೌರವ ಸಲ್ಲಿಸಿದ ರೀತಿ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿ ಹೋಗಿದ್ದಾರೆ. ಈ ವಿಡಿಯೋವನ್ನ ಮೇಜರ್ ಪವನ್ (ನಿವೃತ್ತ) ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸೇನಾ ಅಧಿಕಾರಿ ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆ ಪಕ್ಕದಲ್ಲಿರುವ ಇಬ್ಬರು ಪುಟಾಣಿಗಳನ್ನ ಗಮನಿಸುತ್ತಾರೆ. ಅವರು ಕಾರಿನಿಂದ ಇಳಿದು ಅವರಿಗೆ ತಿನ್ನುವುದಕ್ಕಂತ ಕ್ಯಾಂಡಿಯನ್ನ ಕೊಡುತ್ತಾರೆ. ಅದನ್ನ ತೆಗೆದುಕೊಂಡು ಪ್ರೀತಿಯಿಂದ ಮುಗುಳ್ನಗೋ ಆ ಮಕ್ಕಳು, ಸೇನಾ ಅಧಿಕಾರಿಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ ಒಬ್ಬ ಸೈನಿಕ, ತನ್ನ ಅಧಿಕಾರಿಗೆ ಸಲ್ಲಿಸುವ ರೀತಿಯಲ್ಲಿ ಕಾಲನ್ನ ನೆಲಕ್ಕಪ್ಪಳಿಸಿ ಸೆಲ್ಯೂಟ್ ಮಾಡಿ, ಜೈ ಹಿಂದ್ ಅಂತ ಹೇಳುತ್ತಾರೆ. ಆ ದೃಶ್ಯ ನೋಡ್ತಿದ್ರೆ ಹೃದಯ ತುಂಬಿ ಬರುತ್ತೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಈಗಾಗಲೇ 33 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಮುಗ್ಧ ಮಕ್ಕಳ ಈ ಪ್ರೀತಿಗೆ ನೆಟ್ಟಿಗರು ಫಿದಾ ಆಗಿ ಇವರಿಗೆ ಪ್ರೀತಿಯ ಧಾರೆಯನ್ನೇ ಸುರಿಸಿ ಕಾಮೆಂಟ್ ಹಾಕುತ್ತಿದ್ದಾರೆ.

https://twitter.com/TILIGETITRIGHT/status/1560151617474805762?ref_src=twsrc%5Etfw%7Ctwcamp%5Etweetembed%7Ctwterm%5E1560151617474805762%7Ctwgr%5E07351e53c63bd72f9c057cebe7dc328820c8cb37%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boys-saluting-army-officer-in-heartwarming-video-will-make-you-go-aww-watch-1989554-2022-08-18

https://twitter.com/Heavenizhere/status/1560130665202405376?ref_src=twsrc%5Etfw%7Ctwcamp%5Etweetembed%7Ctwterm%5E1560130665202405376%7Ctwgr%5E07351e53c63bd72f9c057cebe7dc328820c8cb37%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boys-saluting-army-officer-in-heartwarming-video-will-make-you-go-aww-watch-1989554-2022-08-18

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...