ಟರ್ಕಿಯಲ್ಲಿ ನಡೆದ ಉದ್ಘಾಟನಾ ಸಮಾರಂಭವೊಂದರಲ್ಲಿ ದೇಶದ ಅಧ್ಯಕ್ಷರು ರಿಬ್ಬನ್ ಕತ್ತರಿಸುವ ಮುನ್ನ ಬಾಲಕ ಕತ್ತರಿಸಿದ್ದಾನೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಹೆದ್ದಾರಿ ಸುರಂಗ ಮಾರ್ಗದ ಉದ್ಘಾಟನೆಗೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಕಾಯುತ್ತಿದ್ದರು. ಈ ವೇಳೆ ರಿಬ್ಬನ್ ಹಿಡಿದುಕೊಂಡು ಮಕ್ಕಳನ್ನು ಮುಂದೆ ನಿಲ್ಲಿಸಲಾಗಿತ್ತು. ಇನ್ನೇನು ಅಧ್ಯಕ್ಷರು ಉದ್ಘಾಟನೆ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಬಾಲಕ ರಿಬ್ಬನ್ ಕತ್ತರಿಸಿದ್ದಾನೆ. ಇದನ್ನು ಗಮನಿಸಿದ ಅಧ್ಯಕ್ಷರು, ತಮಾಷೆಯಾಗಿ ಹುಡುಗನ ತಲೆಯನ್ನು ತಟ್ಟಿದ್ದಾರೆ.
ತಾಲಿಬಾನಿಗಳ ಬಂದೂಕಿಗೂ ಹೆದರಲಿಲ್ಲ ಮಹಿಳೆ…! ವೈರಲ್ ಆಗಿದೆ ಈ ಫೋಟೋ
ಈಗಾಗಲೇ ಕತ್ತರಿಸಿದ ರಿಬ್ಬನ್ ನ್ನು ಅಧ್ಯಕ್ಷ ಎರ್ಡೋಗನ್ ಕತ್ತರಿಸಿ, ಅವರ ಸುತ್ತ ನಿಂತಿದ್ದ ಮಕ್ಕಳಿಗೆ ಹೈ-ಫೈವ್ ನೀಡುವುದರೊಂದಿಗೆ ಉದ್ಘಾಟನಾ ಸಮಾರಂಭ ಕೊನೆಗೊಳ್ಳುತ್ತದೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ.