ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಈ ವೈರಲ್ ಆಗಿರುವ ವಿಡಿಯೋ ಸಾಬೀತುಪಡಿಸುತ್ತದೆ. ‘ಬಚ್ಪನ್ ಕಾ ಪ್ಯಾರ್ ಹಾಡು’ ಹಾಡಿದ ಸಹದೇವ್ ಎಂಬ ಬಾಲಕ ಜನಪ್ರಿಯವಾದ ಬಳಿಕ ಇದೀಗ ಮತ್ತೊಬ್ಬ ಬಾಲಕ ‘ಅಭಿ ತೋ ಪಾರ್ಟಿ ಶುರು ಹುಯಿ’ ಹಾಡಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಪುಟ್ಟ ಬಾಲಕನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಸಂಪೂರ್ಣ ವಿಶ್ವಾಸದಲ್ಲಿ ಈ ಹಾಡು ಹಾಡಿದ್ದಾನೆ. ಈತನ ಹಾಡಿಗೆ ರೈಲಿನಲ್ಲಿದ್ದ ಇತರೆ ಪ್ರಯಾಣಿಕರು ಕೂಡ ತಲೆದೂಗಿದ್ದಾರೆ. ಹಾಡಿನ ಜೊತೆಗೆ ಈತ ಸಂಗೀತ ವಾದಕ ಧೋಲಕ್ ಅನ್ನು ಬಾರಿಸಿದ್ದಾನೆ.
BIG NEWS: ವಿಧಾನಸಭೆಯಲ್ಲಿ ಬೆಲೆ ಏರಿಕೆ ಪ್ರತಿಧ್ವನಿ; ಆಡಳಿತ-ವಿಪಕ್ಷಗಳ ನಡುವೆ ಗದ್ದಲ-ಕೋಲಾಹಲ
ಬಾಲಕನ ಮುಗ್ಧ ನಗು ಹಾಗೂ ಆತ್ಮವಿಶ್ವಾಸದಿಂದ ಹಾಡಿರುವ ಹಾಡನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ರೈಲಿನಲ್ಲಿದ್ದ ಇತರೆ ಪ್ರಯಾಣಿಕರು ಕೂಡ ಬಾಲಕನಿಗೆ ಪ್ರೋತ್ಸಾಹಿಸುತ್ತಾ ಜೊತೆಗೆ ಹಾಡು ಹಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ಈತನಿಗೂ ಅವಕಾಶ ಸಿಗಲಿ ಎಂದು ಅನೇಕರು ಹಾರೈಸಿದ್ದಾರೆ.
https://www.youtube.com/watch?v=L8VbtCFz-yo&feature=youtu.be