ಖ್ಯಾತ ಸಂಗೀತಗಾರ ಬಾಬ್ ಮಾರ್ಲಿಯ ತ್ರೀ ಲಿಟಲ್ ಬರ್ಡ್ಸ್ ಅನ್ನು ಚಿಕ್ಕ ಹುಡುಗನೊಬ್ಬ ಹಾಡಿದ್ದು, ಅದೀಗ ಭಾರಿ ವೈರಲ್ ಆಗಿದೆ. ವೀಡಿಯೊ ಸಂಪೂರ್ಣವಾಗಿ ಆಕರ್ಷಕವಾಗಿದ್ದು, ನೀವು ಪುನಃ ಪುನಃ ಬಾಲಕನ ಹಾಡನ್ನು ಕೇಳುವಂತೆ ಮಾಡುತ್ತದೆ.
ಹೆನೋಕ್ ಟೆಸ್ಫಾಯೆ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದು 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಬಾಬ್ ಮಾರ್ಲಿ ಅವರ ಹಾಡಾಗಿರುವ ಡೋಂಟ್ ವರಿ ಎಬೌಟ್ ಎ ಥಿಂಗ್ (ಥ್ರೀ ಲಿಟಲ್ ಬರ್ಡ್ಸ್) ಹಾಡುತ್ತಿರುವ ಚಿಕ್ಕ ಹುಡುಗನನ್ನು ನೀವು ನೋಡಬಹುದು. ಈ ಮಗುವಿನ ಮುದ್ದಾದ ವರ್ತನೆ ನಿಮ್ಮನ್ನು ಪ್ರೀತಿಗೆ ಸಿಲುಕಿಸುತ್ತದೆ. ಈ ವಿಡಿಯೋವನ್ನು ಸಹಸ್ರಾರು ಮಂದಿ ಮೆಚ್ಚಿಕೊಂಡಿದ್ದಾರೆ. ಮೂಡ್ ಆಫ್ ಆಗಿದ್ದಾಗ ಈ ಪುಟಾಣಿಯ ಹಾಡು ಕೇಳಿದರೆ ನಿಜವಾಗಿಯೂ ನಿಮ್ಮ ದಿನ ಆನಂದಮಯವಾಗಿರುತ್ತದೆ ಎಂದು ಹಲವರು ಪ್ರತಿಕ್ರಿಯೆ ಮಾಡಿದ್ದಾರೆ.