ನೀವೇನಾದರೂ ಬಹಳ ಬೇಸರದಲ್ಲಿದ್ದೀರಾ..? ಹಾಗಿದ್ದರೆ ಖಂಡಿತಾ ನೀವು ಈ ವಿಡಿಯೋವನ್ನು ನೋಡಬೇಕು. ವಿಡಿಯೋ ನೋಡಿದ್ರೆ ನಿಮ್ಮ ಮನಸ್ಸು ಹಗುರವಾಗೋದ್ರಲ್ಲಿ ಸಂಶಯವೇ ಇಲ್ಲ. ಅಷ್ಟೇ ಅಲ್ಲ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮೊಗದಲ್ಲಿ ನಗು ಮೂಡಿಸುತ್ತದೆ.
ಇದೀಗ ಇರಾಕ್‌ನಲ್ಲಿ ಕಾಫಿ ಮಾರಾಟ ಮಾಡುವ ಪುಟ್ಟ ಬಾಲಕನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಬಾಲಕ ಮುಖದಲ್ಲಿ ಮಂದಹಾಸ ಬೀರುತ್ತಾ ಕಾಫಿ ಕೊಟ್ಟ ರೀತಿ ಖಂಡಿತಾ ನಿಮ್ಮ ದಿನವನ್ನು ಬೆಳಗಿಸುತ್ತದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಡೌಗ್ ಬರ್ನಾರ್ಡ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಡೌಗ್ ಇರಾಕ್‌ನಲ್ಲಿರುವ ಅಮೆರಿಕನ್ ಟ್ರಾವೆಲ್ ಬ್ಲಾಗರ್. ಅವರು ಹಂಚಿಕೊಂಡ ಕಿರು ಕ್ಲಿಪ್‌ನಲ್ಲಿ, ಇರಾಕ್‌ನ ಬಸ್ರಾದಲ್ಲಿ ಬಾಲಕ ಕಾಫಿ ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಆತ ನಗುತ್ತಾ ಗ್ರಾಹಕರಿಗೆ ಕಾಫಿ ನೀಡಿದ್ದಾನೆ. ಅಷ್ಟೇ ಅಲ್ಲದೆ ಆತ ಕಾಫಿಗೆ ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾನೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ.
https://youtu.be/YWJAS3rtF0Y