ಕೊರೊನಾ ಎರಡನೆ ಅಲೆಯ ಅಬ್ಬರವೇನೋ ಕಡಿಮೆ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ. ದೇಶದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ಸಿಕ್ಕಿದೆ. ಈ ನಡುವೆಯೂ ಅನೇಕ ಪ್ರವಾಸಿಗರು ಶಿಮ್ಲಾ, ಮನಾಲಿ, ಧರ್ಮಶಾಲಾ ಸೇರಿದಂತೆ ಹಲವೆಡೆ ರೌಂಡ್ಸ್ ಹಾಕುತ್ತಾ ಜಾಲಿ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಮಾತಿಗೆ ಪುರಾವೆ ಎಂಬಂತ ಸಾಕಷ್ಟು ಫೋಟೋಗಳನ್ನ ನೀವು ಕಂಡಿದ್ದಿರಬಹುದು. ಆದರೆ ಈ ಎಲ್ಲದರ ನಡುವೆ ಧರ್ಮಶಾಲಾದಲ್ಲಿ ಪುಟ್ಟ ಬಾಲಕೊಬ್ಬ ಮಾಸ್ಕ್ ಹಾಕದ ಜನರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ದೃಶ್ಯಾವಳಿಯ ತುಣುಕುಗಳು ಇಂಟರ್ನೆಟ್ನಲ್ಲಿ ಭಾರೀ ಸದ್ದು ಮಾಡ್ತಿದೆ.
ಧರ್ಮಶಾಲಾದ ರಸ್ತೆಯ ಬದಿಯಲ್ಲಿ ನಿಂತ ಪುಟ್ಟ ಬಾಲಕ, ಜನರ ಬಳಿ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾನೆ. ಈತನ ಬಳಿ ಹಾಕಿಕೊಳ್ಳಲು ಚಪ್ಪಲಿ ಕೂಡ ಇಲ್ಲ. ಮುಖಕ್ಕೆ ಮಾಸ್ಕ್ ಹಾಕಿ ಕೈಯಲ್ಲಿ ಕೋಲನ್ನ ಹಿಡಿದಿರುವ ಬಾಲಕ ತನ್ನ ಸಮೀಪ ಬಂದ ಎಲ್ಲರಿಗೂ ನಿಮ್ಮ ಮಾಸ್ಕ್ ಎಲ್ಲಿ ಎಂದು ಆವಾಜ್ ಹಾಕಿದ್ದಾನೆ. ಆದರೆ ದುಃಖಕರ ವಿಚಾರ ಎಂಬಂತೆ ಅನೇಕರು ಬಾಲಕ ಮಾತನ್ನ ಕಿವಿಗೂ ಹಾಕಿಕೊಂಡಿಲ್ಲ. ಆದರೆ ಈ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು 2.47 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.