alex Certify Watch Video | ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಮನೆಗೆ ಬಂದ ಪುಟ್ಟ ಬಾಲಕ; ಮನಕಲಕುತ್ತೆ ಈತನ ಒಡಹುಟ್ಟಿದವರ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಮನೆಗೆ ಬಂದ ಪುಟ್ಟ ಬಾಲಕ; ಮನಕಲಕುತ್ತೆ ಈತನ ಒಡಹುಟ್ಟಿದವರ ಪ್ರತಿಕ್ರಿಯೆ

ಕ್ಯಾನ್ಸರ್​ ಸುಲಭದ ಯುದ್ಧವಂತೂ ಅಲ್ವೇ ಇಲ್ಲ. ಈ ರೋಗವು ಸೋಂಕಿತ ವ್ಯಕ್ತಿಗೆ ಮಾತ್ರವಲ್ಲದೇ ಇಡೀ ಕುಟುಂಬಕ್ಕೆ ಒಂದು ರೀತಿ ಶಿಕ್ಷೆಯಿದ್ದಂತೆ. ಇವರ ಜೊತೆಗೆ ಇರುವವರಿಂದ ಮಾಡಲು ಸಾಧ್ಯವಾಗುವ ಒಂದೇ ಒಂದು ಕೆಲಸ ಅಂದ್ರೆ ರೋಗಿಯನ್ನು ಸಂತೋಷವಾಗಿಟ್ಟುಕೊಳ್ಳುವುದು.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆದು ಮನೆಗೆ ಬಂದ ಬಾಲಕನ್ನು ನೋಡಿ ಆತನ ಒಡಹುಟ್ಟಿದವರು ನೀಡಿದ ರಿಯಾಕ್ಷನ್​ ನೆಟ್ಟಿಗರ ಮನಕಲಕುವಂತಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾಗಿದೆ.

ತಿಂಗಳುಗಳ ಬಳಿಕ ಚಿಕ್ಕ ಹುಡುಗ ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಮನೆಗೆ ಬಂದಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈತನನ್ನು ನೋಡಿದ ಆತನ ಸಹೋದರ ಹಾಗೂ ಸಹೋದರಿ ಕಣ್ಣೀರಿಡುತ್ತಾ ಈತನ ಬಳಿ ಓಡಿ ಬರ್ತಾರೆ. ಹಾಗೂ ಒಬ್ಬರನ್ನೊಬ್ಬರು ಅಪ್ಪಿಕೊಳ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಹುಡುಗ ನಿಜವಾದ ಫೈಟರ್​ ಅಂತಾ ಹೇಳ್ತಿದ್ದಾರೆ.

ಅಲ್ಲದೇ ಇನ್ನೂ ಕೆಲವರು ಈ ಬಾಲಕ ಶೀಘ್ರ ಗುಣಮುಖನಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇಂತಹ ದೊಡ್ಡ ದೊಡ್ಡ ಕಾಯಿಲೆಯನ್ನ ದೇವರು ಮಕ್ಕಳಿಗೇಕೆ ಕೊಡ್ತಾನೆ ಎಂದು ಕಮೆಂಟ್​ನಲ್ಲಿ ಅನೇಕರು ಪ್ರಶ್ನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...