ಫೇಸ್ಬುಕ್ ಸಹ-ಸಂಸ್ಥಾಪಕ ಮತ್ತು ಮೆಟಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಮತ್ತು ಅವರ ಪತ್ನಿ ಡಾ. ಪ್ರಿಸ್ಸಿಲ್ಲಾ ಚಾನ್ ತಮ್ಮ ಮೂರನೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜುಕರ್ಬರ್ಗ್ ತಮ್ಮ ಮೂರನೇ ಮಗಳು ಆರೆಲಿಯಾ ಚಾನ್ ಜುಕರ್ಬರ್ಗ್ನ ಜನನವನ್ನು ಅಧಿಕೃತವಾಗಿ ಇನ್ ಸ್ಟಾಗ್ರಾಂನಲ್ಲಿ ಘೋಷಿಸಿದ್ದಾರೆ.
“ಜಗತ್ತಿಗೆ ಸ್ವಾಗತ, ಆರೆಲಿಯಾ ಚಾನ್ ಜುಕರ್ಬರ್ಗ್ ! ನೀವು ಆಶೀರ್ವಾದ ಹೊಂದಿದ್ದೀರಿ” ಎಂದು ಅವರು ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ ಜುಕರ್ಬರ್ಗ್ ತನ್ನ ನವಜಾತ ಶಿಶುವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು.
ಎರಡನೆಯ ಚಿತ್ರದಲ್ಲಿ ಪ್ರಿಸ್ಸಿಲ್ಲಾ ಚಾನ್ ಹೆಣ್ಣು ಮಗುವನ್ನು ತನ್ನ ಹತ್ತಿರ ಹಿಡಿದಿಟ್ಟುಕೊಂಡಿರುವುದನ್ನ ತೋರಿಸುತ್ತದೆ. ತನ್ನ ನವಜಾತ ಮಗಳೊಂದಿಗೆ ಮಾರ್ಕ್ ಜುಕರ್ ಬರ್ಗ್ ಹಂಚಿಕೊಂಡಿರುವ ಫೋಟೋಗೆ ಭಾರೀ ಲೈಕ್ಸ್ ಬಂದಿದ್ದು ದಂಪತಿಯನ್ನು ನೆಟ್ಟಿಗರು ಅಭಿನಂದಿಸಿದ್ದಾರೆ.
ಜುಕರ್ ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ 2012 ರಲ್ಲಿ ವಿವಾಹವಾಗಿದ್ದು, ಈಗಾಗಲೇ ಐದು ವರ್ಷದ ಆಗಸ್ಟ್ ಮತ್ತು ಏಳು ವರ್ಷದ ಮ್ಯಾಕ್ಸಿಮಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.