
ಕೋಗಿಲೆಯ ಬಗ್ಗೆ ಮಕ್ಕಳಿಗೆ ಆಗಾಗ್ಗೆ ಹೇಳುತ್ತಲೇ ಇರುತ್ತೇವೆ. ಇದರ ಕುಕ್ಕೂ ನಾದ ಬಹಳ ಇಂಪಾಗಿ ಹಾಗೂ ಕುತೂಹಲಭರಿತವಾಗಿ ಕೇಳಿಸುತ್ತದೆ. ನಮ್ಮಲ್ಲಿ ಅನೇಕರು ಕೋಗಿಲೆಯ ಕುಕ್ಕೂ ದನಿಯ ಗಡಿಯಾರಗಳನ್ನೂ ಕೇಳಿರಬಹುದು. ಇದೇ ಶಬ್ದದ ರಿಂಗ್ ಟೋನ್ ಗಳನ್ನು ಫೋನ್ಗಳಲ್ಲಿ ಇಟ್ಟುಕೊಂಡಿರುತ್ತೇವೆ.
ಆದರೆ ನಿಜವಾಗಿಯೂ ಕೋಗಿಲೆಯನ್ನು ಹತ್ತಿರದಿಂದ ನೋಡಿದವರೇ ಕಮ್ಮಿ ಎನ್ನಬಹುದೇನೊ. ಮರಗಳಲ್ಲಿ ನೋಡಿದರೂ ದೂರದಿಂದ ನೋಡಿರಬಹುದು, ಹತ್ತಿರದಿಂದ ನೋಡಿದರೂ ಅದು ಹೇಗೆ ಕುಕ್ಕೂ ಶಬ್ದ ಮಾಡುತ್ತದೆ ಎಂದು ನೋಡಿರುವವರು ಅತಿ ವಿರಳ.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ಸಾಧ್ಯ. ವನ್ಯಜೀವಿಗಳ ಚಿತ್ರಗಳು, ವಿಡಿಯೋಗಳು ಮತ್ತು ಇತರ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ತಿಳಿಯಬಹುದು. ಇದೀಗ ಕೋಗಿಲೆಯನ್ನು ಅತಿ ಹತ್ತಿರದಿಂದ ಮಾತ್ರವಲ್ಲದೇ ಅದರ ಕುಕ್ಕೂ ಶುದ್ಧವನ್ನು ಶುದ್ಧವಾಗಿ ನೋಡಲು ಅನುಕೂಲ ಆಗುವ ವಿಡಿಯೋ ಒಂದು ವೈರಲ್ ಆಗಿದೆ. ಈ ಸುಂದರವಾದ ಜೀವಿಗಳನ್ನು ತಮ್ಮ ಸ್ವಂತ ವಾಸಸ್ಥಳದಲ್ಲಿ ವೀಕ್ಷಿಸುವುದು ನಿಜಕ್ಕೂ ಒಂದು ಆಶೀರ್ವಾದ.