alex Certify BIG NEWS : ‘ಶಿಕ್ಷಣ ಇಲಾಖೆ’ಯಿಂದ ಉನ್ನತೀಕರಿಸಿದ ಶಾಲೆಗಳ ಪಟ್ಟಿ ಬಿಡುಗಡೆ, ಹೀಗೆ ಚೆಕ್ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಶಿಕ್ಷಣ ಇಲಾಖೆ’ಯಿಂದ ಉನ್ನತೀಕರಿಸಿದ ಶಾಲೆಗಳ ಪಟ್ಟಿ ಬಿಡುಗಡೆ, ಹೀಗೆ ಚೆಕ್ ಮಾಡಿ..!

‘ಬೆಂಗಳೂರು : ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ 2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸಿ (6-7/8ನೇ ತರಗತಿ) ಪ್ರಾರಂಭಿಸಲು ಮತ್ತು ಹಾಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿರುತ್ತದೆ.

ಸದರಿ ಸ್ವೀಕೃತ ಪ್ರಸ್ತಾವನೆಗಳನ್ನು ತಾಲ್ಲೂಕು/ಜಿಲ್ಲಾ/ವಿಭಾಗ ಹಂತದ eve ಪರಿಶೀಲನಾ ಸಮಿತಿಗಳು ನಿಗಧಿಪಡಿಸಿದ ಮಾನದಂಡಗಳಂತೆ ಪರಿಶೀಲಿಸಿ ಅಗತ್ಯ ಶಿಫಾರಸ್ಸಿನ ಮೂಲಕ ಪ್ರಸ್ತಾವನೆಗಳನ್ನು ಈ ಕಛೇರಿಗೆ ಸಲ್ಲಿಸಲಾಗಿರುತ್ತದೆ.

ಉಲ್ಲೇಖ-3ರನ್ವಯ ಸದರಿ ತಾಲ್ಲೂಕು/ಜಿಲ್ಲಾ/ವಿಭಾಗ ಹಂತದ ಸಮಿತಿಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಈ ಕಚೇರಿಯಿಂದ ಪುನರ್ ಪರಿಶೀಲಿಸಿ ಪ್ರಥಮ ಆಧ್ಯತೆ ಮೇಲೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ, ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ, ಬೋಧನೆಗೆ ಶಿಕ್ಷಕರ ಲಭ್ಯತೆ ಇರುವ ಹಾಗೂ ಇಲಾಖೆ/ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಅರ್ಹವಿರುವ ಶಾಲೆಗಳನ್ನು ಪರಿಶೀಲಿಸಿ, ಪರಿಗಣಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಏಕ ಕಡತದ ಮೂಲಕ ಈ ಕೆಳಕಂಡಂತೆ ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.

ಉಲ್ಲೇಖ-4ರನ್ವಯ 2024-25ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಉನ್ನತ್ತೀಕರಿಸಿ ಪ್ರಾರಂಭಿಸಲು ಸರ್ಕಾರವು ಆಡಳಿತಾತ್ಮಕ ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಷರತ್ತುಗಳನ್ನು ವಿಧಿಸಿ ಆದೇಶಿಸಿದೆ.

ಆದೇಶ:
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ವಯ ತಾಲ್ಲೂಕು/ಜಿಲ್ಲಾ/ರಾಜ್ಯ ಹಂತದ ಸಮಿತಿಗಳು ಮಾಡಿರುವ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮತ್ತು ಉಲ್ಲೇಖ-4ರನ್ವಯ ಸರ್ಕಾರವು ಏಕಕಡತದಲ್ಲಿ ನೀಡಿರುವ ಅನುಮೋದನೆಯಂತೆ ಕೆಳಕಂಡ ನಿಬಂಧನೆಗಳನ್ನು ಪಾಲಿಸುವ ಷರತ್ತುಗಳಿಗೊಳಪಟ್ಟು ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗೆ (6 ರಿಂದ 7/8ನೇ ತರಗತಿ) ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯನ್ನು 8ನೇ ತರಗತಿಯಾಗಿ ಉನ್ನತೀಕರಿಸಿ ಪ್ರಾರಂಭಿಸುವ ಕುರಿತಂತೆ ಪ್ರಥಮ ಆದ್ಯತೆ ಮೇರೆಗೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಹೊಂದಿರುವ/ ಮಕ್ಕಳ ದಾಖಲಾತಿ ಹೆಚ್ಚಿರುವ ಹಾಗೂ ಕಳೆದ ಸಾಲಿನಲ್ಲಿ ಕ್ರಮವಾಗಿ 5 ಮತ್ತು 7ನೇ ತರಗತಿಯಲ್ಲಿ ಕನಿಷ್ಠ 25 ಮಕ್ಕಳ ದಾಖಲಾತಿ ಇರುವ ಹಾಗೂ ಭೌಗೋಳಿಕ ಅಡೆತಡೆಗಳು ಇರುವ ಶಾಲೆಗಳನ್ನು ಆಧ್ಯತೆ ಮೇಲೆ ಪರಿಗಣಿಸಿ ಈ ಕೆಳಕಂಡಂತೆ ಪ್ರಾರಂಭಿಸಲು ಅನುಮತಿ ನೀಡಿ ಆದೇಶಿಸಿದೆ. (ಅನುಮೋದಿತ ಶಾಲೆಗಳ ಪಟ್ಟಿಯನ್ನು ಅನುಬಂಧ- 1 ಮತ್ತು 2ರಲ್ಲಿ ದಾಖಲಿಸಿ ಇದರೊಂದಿಗೆ ಅನುಬಂಧಿಸಿದೆ)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...