ಬೆಂಗಳೂರು: ಕ್ರಿಸ್ಮಸ್ ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದು ದಿನ ಸಾಂದರ್ಭಿಕ ಸನ್ನದು ಸಿಎಲ್5 ಬೇಡಿಕೆ ಬಂದಿದೆ. ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಪರವಾನಿಗೆ ಕೋರಿ ಅಬಕಾರಿ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಇದನ್ನು ಪರಿಗಣಿಸಿ ಮದ್ಯ ಮಾರಾಟಕ್ಕೆ ಪರವಾನಿಗೆ ಪಡೆಯುವವರಿಗೆ ಒಂದು ದಿನಕ್ಕೆ ಮಾತ್ರ ಅವಕಾಶ ನೀಡಲಾಗುವುದು.
ಇದರಿಂದ ಸರ್ಕಾರಕ್ಕೆ ಸುಮಾರು 6-7 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ನಿಮಿತ್ತ ಸಾಂದರ್ಭಿಕ ಸನ್ನದು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತೆಯ ಕುರಿತಾಗಿ ಅಬಕಾರಿ ಇಲಾಖೆಗೆ ಈಗಾಗಲೇ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸನ್ನದು ಮಂಜೂರು ಸಂದರ್ಭದಲ್ಲಿ ಇಲಾಖೆಯಿಂದ ಷರತ್ತು ವಿಧಿಸಲಾಗಿದೆ. ಸ್ಥಳದಲ್ಲಿ ಮದ್ಯ, ಬಿಯರ್ ಸೇವನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ರೂಫ್ ಟಾಪ್ ಗಳಿಗೆ ಸನ್ನದು ಮಂಜೂರು ಮಾಡುವಾಗ ಅಡುಗೆ ಕೋಣೆ ಇರಬಾರದು. ಒಲೆ, ಸಿಲಿಂಡರ್, ಬೆಂಕಿ, ಉಪಕರಣಗಳು ಕೂಡ ಇರಕೂಡದು, ಅಹಿತಕರ ಘಟನೆ ನಡೆದಂತೆ ಭದ್ರತೆ ಖಾತರಿಪಡಿಸಿಕೊಂಡ ಬಳಿಕ ಸನ್ನದು ಇಡಬೇಕು ನಿಗದಿಪಡಿಸಲಾದ ಮತ್ತು ಹೆಚ್ಚುವರಿ ಶುಲ್ಕ ಪಾವತಿಸಬೇಕು. ಕೆ.ಎಸ್.ಬಿ.ಸಿ.ಎಲ್., ಸಿಎಲ್2 ಮತ್ತು ಸಿಎಲ್ 11ಸಿ ಸನ್ನದುಗಳಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ, ಬಿಯರ್ ಮಾತ್ರ ಬಳಸಬೇಕೆಂದು ಹೇಳಲಾಗಿದೆ.