ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಮದ್ಯಪ್ರಿಯರಿಗೆ ಬೇಡಿಕೆಯಷ್ಟು ಮದ್ಯ ಸಿಗದೇ ಆಘಾತ ಉಂಟಾಗಿದೆ.
ಮದ್ಯಕ್ಕೆ ಭಾರಿ ಬೇಡಿಕೆ ಹೆಚ್ಚಾಗಿದ್ದು, 15 ದಿನಗಳ ಅವಧಿಯಲ್ಲಿ ಶೇಕಡ 20ರಷ್ಟು ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಕೆ ಆಗುತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಬಿಗಿ ನಿಯಮಾವಳಿ ಜಾರಿಯಲ್ಲಿರುವ ಕಾರಣ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಧ್ಯ ಸಿಗುತ್ತಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ಕಾರಣ ಮದ್ಯದ ಬೆಲೆ ಹೆಚ್ಚಳವಾಗಿದೆ. ಶೇಕಡ 10 ರಿಂದ 15 ರಷ್ಟು ದರ ಜಾಸ್ತಿಯಾಗಿದೆ.
ಕೆಲವೆಡೆ ಬೇಡಿಕೆ ಹೆಚ್ಚಾಗಿರುವುದರಿಂದ ದರ ಹೆಚ್ಚಳ ಮಾಡಲಾಗಿದೆ. ಶೇಕಡ 20ರಷ್ಟು ಪೂರೈಕೆ ಕಡಿಮೆಯಾಗಿದೆ. ಚುನಾವಣೆ ಕಾರಣದಿಂದ ಮದ್ಯ ವಶಪಡಿಸಿಕೊಳ್ಳುತ್ತಿರುವುದರಿಂದ ನಷ್ಟವೂ ಉಂಟಾಗುತ್ತಿದೆ. ಬೇಡಿಕೆ ಇರುವಷ್ಟು ಮದ್ಯ ಪೂರೈಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗಿದೆ.