ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ನೆರೆ ರಾಜ್ಯಗಳ ಮದ್ಯದ ಬೆಲೆಯನ್ನು ಪರಿಗಣಿಸಿ ದರ ಪರಿಷ್ಕರಿಸಲು ಆದೇಶ ಹೊರಡಿಸಿದೆ. ಜುಲೈ 1ರಿಂದ ಪರಿಷ್ಕೃತ ಆದೇಶ ಜಾರಿಯಾಗಲಿದ್ದು, ಇದರಿಂದ ಕೆಲವು ಅಗ್ಗದ ಮದ್ಯಗಳು ದುಬಾರಿಯಾಗಲಿವೆ. ದುಬಾರಿ ಮದ್ಯದ ದರಗಳು ಸ್ವಲ್ಪ ಕಡಿಮೆಯಾಗಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದಂತೆ ನೆರೆ ರಾಜ್ಯಗಳ ಮದ್ಯದ ಬೆಲೆಯನ್ನು ಪರಿಗಣಿಸಿ ದರ ಪರಿಷ್ಕರಿಸಲು ಅಬಕಾರಿ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿದೆ. ನೆರೆ ರಾಜ್ಯಗಳಲ್ಲಿ ಕಡಿಮೆ ಬೆಲೆಯ ಮದ್ಯದ ದರ ಹೆಚ್ಚಿದ್ದು, ರಾಜ್ಯದಲ್ಲಿ ಕಡಿಮೆ ಇದೆ. ಜುಲೈ ಒಂದರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಇದರ ಅನ್ವಯ ಕೆಲವು ಅಗ್ಗದ ಮದ್ಯಗಳು ದುಬಾರಿಯಾಗಲಿದ್ದು, ದುಬಾರಿ ಮದ್ಯಗಳ ದರ ಸ್ವಲ್ಪ ಕಡಿಮೆಯಾಗಲಿದೆ. ಬೇರೆ ರಾಜ್ಯಗಳ ಮಧ್ಯದ ದರ ಪರಿಗಣಿಸಿ ಸಮತೋಲನ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಅಂತೆಯೇ ಕ್ರಮ ಕೈಗೊಳ್ಳಲಾಗಿದೆ.