ಕೇರಳದಲ್ಲಿ ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮದ್ಯ ಖರೀದಿಸಲು ಭಾರಿ ಜನಸಂದಣಿ ಉಂಟಾಗುತ್ತಿದೆ. ಮದ್ಯದಂಗಡಿಗಳ ಬಳಿ ಜನ ಹೆಚ್ಚಾಗಿ ಸೇರುವುದನ್ನು ನಿಯಂತ್ರಿಸಲು ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ.
ಮದ್ಯದ ಅಂಗಡಿಗಳ ಬಳಿ ಖರೀದಿಗೆ ಬದಲಿ ವ್ಯವಸ್ಥೆ ಬಗ್ಗೆ ಕೇರಳ ಸರ್ಕಾರ ಚಿಂತನೆ ನಡೆಸಿದ್ದು, ಆನ್ಲೈನ್ ಮೂಲಕ ಹಣ ಪಾವತಿಸಿ ಇ -ಪೇಮೆಂಟ್ ರಶೀದಿ ತೋರಿಸಿ ಮದ್ಯ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಇದಕ್ಕಾಗಿಯೇ ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗಿದ್ದು, ತಿರುವನಂತಪುರದಲ್ಲಿ 9 ಕಡೆಗಳಲ್ಲಿ ಪ್ರಾಯೋಗಿಕವಾಗಿ ಈ ರೀತಿ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾಗುತ್ತಿರುವುದರಿಂದ ರಾಜ್ಯದೆಲ್ಲೆಡೆ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.