ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ವಯಸ್ಸನ್ನು ಲೆಕ್ಕಿಸದೆ ಮದ್ಯದ ವ್ಯಸನಿಯಾಗುತ್ತಿದ್ದಾರೆ. ಮದ್ಯದಂಗಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಕಡಿಮೆಯಾಗುತ್ತಿಲ್ಲ.
ಇನ್ನೂ ಬಿರುಬೇಸಿಗೆ ಹೊತ್ತಲ್ಲಿ ಅನೇಕ ಜನರು ತಣ್ಣನೆಯ ಬಿಯರ್ ಗಳ ಮೊರೆ ಹೋಗುತ್ತಿದ್ದಾರೆ. ಒಂದು ಬಿಯರ್ ನ ಬೆಲೆ ಮಾರುಕಟ್ಟೆಯಲ್ಲಿ 150 ರೂ.ಗೆ ಇದೆ. 650 ಎಂಎಲ್ ಲೈಟ್ ಬಿಯರ್ ನ ಮೂಲ ಬೆಲೆ 40 ರೂ. ಆದರೆ ಇದು ಗ್ರಾಹಕರ ಬಳಿ ಬರುವಾಗ 150 ರೂ. ಆಗುತ್ತದೆ. ಇದರರ್ಥ ಈ ಬಿಯರ್ 60% ಕ್ಕಿಂತ ಹೆಚ್ಚು ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿದೆ. ಇದರರ್ಥ ಬಿಯರ್ ಮೇಲೆ ಸುಮಾರು 60 ರೂ.ಗಳ ತೆರಿಗೆ ಪಾವತಿಸಬೇಕಾಗುತ್ತದೆ. ವೈನ್ ಶಾಪ್ , ಸರ್ಕಾರದ ತೆರಿಗೆ ಸೇರಿ ಬಿಯರ್ ಮಾರಾಟ ಮಾಡಲಾಗುತ್ತದೆ.
ಈ ರೀತಿಯಾಗಿ ನಾವು ಕುಡಿಯುವ ಪ್ರತಿಯೊಂದು ಬಾಟಲಿ ಮದ್ಯದ ಮೇಲೆ ಸರ್ಕಾರ ತೆರಿಗೆ ಸಂಗ್ರಹಿಸುತ್ತಿದೆ ಎಂದು ವ್ಯಾಪಾರ ವಿಶ್ಲೇಷಕರು ಹೇಳುತ್ತಾರೆ. ಇದರರ್ಥ ಈ ಬೆಲೆಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ ಎಂದಿದ್ದಾರೆ.