ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ಮದ್ಯದ ಬೆಲೆಯಲ್ಲಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಮದ್ಯದ ಪ್ರಮಾಣದಲ್ಲಿ ಶೇ. 15 ರಷ್ಟು ಕುಸಿತ ಕಂಡಿದೆ.
ಬೆಲೆ ಏರಿಕೆಯಿಂದ ಮದ್ಯಪ್ರಿಯರು ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾದ್ದು, ಮದ್ಯ ಮಾರಾಟ ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ. ರಾಜ್ಯ ಪಾನೀಯ ನಿಗಮಕ್ಕೆ ಲಿಕ್ಕರ್‌ಗೆ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರುತ್ತಿತ್ತು. ಈ ಆಗಸ್ಟ್‌ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.
ಕಡಿಮೆ ದರದ ಬ್ರ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚು ದರದ ಬ್ರ್ಯಾಂಡ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯವಾಗಿದ್ದು, ಈ ಆಗಸ್ಟ್ ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರು ಶಾಕ್ ಕೊಟ್ಟಿದ್ದಾರೆ.