ಮದ್ಯ ನಿಷೇಧದಿಂದ ಬರಗೆಟ್ಟು ಹೋಗಿರುವ ಬಿಹಾರದ ಕುಡುಕರಿಗೆ ಎಲ್ಲಾದರೂ ಸ್ವಲ್ಪ ಹೆಂಡ ಸಿಕ್ಕರೆ ಸಾಕು ಎಂಬಂತಾಗಿದೆ.
ರಾಜ್ಯದ ಉಷ್ಕಾಗಾಂವ್‌ನ ಮಚ್ಕಾ ಬಜ಼ಾರ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಲ್ಲಿಸಿರುವ ಮದ್ಯದ ಬಾಟಲಿಗಳು ತುಂಬಿರುವ ಜೀಪ್ ಒಂದರಲ್ಲಿರುವ ಡಬ್ಬಗಳನ್ನು ಎತ್ತಿಕೊಳ್ಳಲು ಜನ ಮುಗಿಬಿದ್ದಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಮದ್ಯದ ಬಾಟಲಿಗಳ ತಲಾಶೆಯಲ್ಲಿ ಕುಡುಕರು ಜೀಪ್‌ನ ಕಿಟಕಿಗಳನ್ನು ಒಡೆದು ಹಾಕಿದ್ದು, ದಾಂಧಲೆ ಮಾಡಿದ್ದಾರೆ.
ತೂಕ ಇಳಿಸುವವರು ಈ ತಪ್ಪು ಮಾಡ್ಬೇಡಿ
ಕೈಗೆ ಸಿಕ್ಕ ಬಾಟಲಿಗಳನ್ನು ದೋಚಿ ಪರಾರಿಯಾಗುತ್ತಿದ್ದ ಈ ಮಂದಿಯನ್ನು ಬೆನ್ನತ್ತಲು ಪೊಲೀಸರು ಬರುತ್ತಿದ್ದಂತೆಯೇ, “ಏಯ್ ಓಡ್ರೋ, ಪೊಲೀಸರು ಬಂದ್ರು” ಒಬ್ಬಾತ ತನ್ನ ಸಹಚರರನ್ನು ಅಲರ್ಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೆಲ ಸೆಕೆಂಡ್‌ಗಳ ಬಳಿಕ ಇದೇ ಜನರ ಮತ್ತೊಂದು ಗುಂಪು ವಾಹನದ ಹಿಂಬದಿ ಸೀಟಿನ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಘಟನೆಯಲ್ಲಿ ವಾಹನದ ಹಿಂಬದಿ ಗಾಜು ಪುಡಿಪುಡಿಯಾಗಿರುವಂತೆ ಕಾಣುತ್ತಿದೆ.
https://twitter.com/UtkarshSingh_/status/1473495980074934274?ref_src=twsrc%5Etfw%7Ctwcamp%5Etweetembed%7Ctwterm%5E1473495980074934274%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fliquor-loot-citizens-go-nuts-over-smuggled-liquor-in-bihar-trash-car-to-steal-bottles-watch%2F842929