ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಬಹುದೆಂದು ಕಾರಣಕ್ಕೆ ಮದ್ಯದಂಗಡಿಯ ಎದುರು ಜನ ಮುಗಿಬಿದ್ದಿದ್ದಾರೆ.
ಈ ಹಿಂದೆ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಮದ್ಯಸಿಗದೆ ಮದ್ಯಪ್ರಿಯರು ಪರದಾಡುವಂತಾಗಿತ್ತು. ದುಬಾರಿ ಹಣ ನೀಡಿ ಮದ್ಯ ಖರೀದಿಸುವಂತಾಗಿತ್ತು. ಕೆಲವರು ಮದ್ಯ ಸಿಗದೇ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹಾಗಾಗಿ ಈ ಬಾರಿ ಮೊದಲೇ ಸ್ಟಾಕ್ ಮಾಡಿಕೊಳ್ಳಲು ಮದ್ಯಪ್ರಿಯರು ಮುಂದಾಗಿದ್ದು, ಸರ್ಕಾರ ಸರ್ವಪಕ್ಷ ಸಭೆ ಕರೆದು ಕಠಿಣ ನಿಯಮ ಜಾರಿಗೊಳಿಸಲಿದೆ ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಮದ್ಯಪ್ರಿಯರು ಎಣ್ಣೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಮದ್ಯದಂಗಡಿಗಳ ಬಳಿ ನೂಕುನುಗ್ಗಲು ಉಂಟಾಗಿದ್ದು, ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ್ದಾರೆ, ದಿನ ಖರೀದಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸತೊಡಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಎಣ್ಣೆ ಅಂಗಡಿಗಳ ಎದುರು ಜನ ಮುಗಿಬಿದ್ದು, ನೂಕುನುಗ್ಗಲಲ್ಲಿ ಮದ್ಯ ಖರೀದಿಸಿದ ದೃಶ್ಯಗಳು ಕಂಡು ಬಂದಿವೆ. ಆದರೆ, ಲಾಕ್ ಡೌನ್ ಜಾರಿ ಮಾಡಲ್ಲ. ಜನ ಆತಂಕಕ್ಕೆ ಒಳಗಾಗುವುದು ಬೇಡವೆಂದು ಹೇಳಲಾಗಿದೆ.