ಬೆಂಗಳೂರು: ಜೂನ್ ಮೊದಲ ವಾರ 5 ದಿನ ಬಾರ್ ಅಂಡ್ ರೆಸ್ಟೊರೆಂಟ್, ವೈನ್ ಸ್ಟೋರ್, ಮದ್ಯದಂಗಡಿ ಬಂದ್ ಆಗಲಿವೆ.
ವಿಧಾನಪರಿಷತ್ ಚುನಾವಣೆ, ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರಣದಿಂದ ಜೂನ್ ಮೊದಲ ವಾರ ಒಂದು ದಿನ ಹೊರತುಪಡಿಸಿ ಐದು ದಿನ ಮದ್ಯ ಬಂದ್ ಆಗಲಿದೆ.
ಜೂನ್ 3ರಂದು ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೂನ್ 1ರ ಸಂಜೆ 4:00 ಯಿಂದ ಜೂನ್ ಮೂರರ ಸಂಜೆ 4ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯಲಿರುವುದರಿಂದ ರಾಜ್ಯದಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಜೂನ್ 5ರಂದು ಮದ್ಯ ಮಾರಾಟಕ್ಕೆ ಅವಕಾಶವಿದೆ.
ಜೂನ್ 6ರಂದು ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಅಂದು ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ.