ಚೀನಾದಲ್ಲಿ ಅಲಿಬಾಬಾ ಸಮೂಹವು ಇತ್ತೀಚೆಗೆ ನಡೆಸಿದ ವಾರ್ಷಿಕ ಶಾಪಿಂಗ್ ಉತ್ಸವದಲ್ಲಿ, ‘ಲಿಪ್ಸ್ಟಿಕ್ ಬ್ರದರ್’ ಒಂದು ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದ್ದಾರೆ.
ಆಸ್ಟಿನ್ ಲಿ ಅಥವಾ ಲಿ ಜಿಯಾಕಿನನ್ನು, ‘ಲಿಪ್ಸ್ಟಿಕ್ ಬ್ರದರ್’ ಅಥವಾ ‘ಲಿಪ್ಸ್ಟಿಕ್ ಗಳ ರಾಜ’ ಎಂದೂ ಕೂಡ ಕರೆಯುತ್ತಾರೆ. ಈತನನ್ನು ಚೀನಾದ ಅತಿದೊಡ್ಡ ಪುರುಷ ಸೌಂದರ್ಯ ಪ್ರಭಾವಿ ಅಂತಲೂ ಹೇಳುತ್ತಾರೆ. ಅವರು ತಮ್ಮ ಲೈವ್ಸ್ಟ್ರೀಮ್ಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅದು ಕಳೆದ ವರ್ಷವೂ ದಾಖಲೆಗಳನ್ನು ಮುರಿದಿದೆ.
ಅಲಿಬಾಬಾ ಗುಂಪಿನ ಮಾಲೀಕತ್ವದ ಚೀನಾದ ಶಾಪಿಂಗ್ ಆಪ್ ಟಾವೊಬಾವೊದಲ್ಲಿ ಲಿ ತನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾನೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಶಿಸೈಡೋ ಲೋಷನ್ಗಳಿಂದ ಹಿಡಿದು ಆಪಲ್ ಏರ್ಪಾಡ್ಗಳವರೆಗಿನ ಉತ್ಪನ್ನಗಳಲ್ಲಿ ಲಿ, 12 ಬಿಲಿಯನ್ ಯುವಾನ್ಗಳನ್ನು ಮೊದಲೇ ಮಾರಾಟ ಮಾಡಿದ್ದಾರೆ. ಮಿಲಿಯನೇರ್ ಆಗಿರುವ ಲಿ ಒಮ್ಮೆ ಕೇವಲ ಐದು ನಿಮಿಷಗಳಲ್ಲಿ 15,000 ಲಿಪ್ ಸ್ಟಿಕ್ ಗಳನ್ನು ಮಾರಿದ್ದರಂತೆ.
ಅವರು ಚೀನಾದ ಟಿಕ್ಟಾಕ್ನ ಆವೃತ್ತಿಯಾದ ಡೌಯಿನ್ನಲ್ಲಿ ಸುಮಾರು 40 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು 2019 ರಲ್ಲಿ, ಲಿ 30 ಸೆಕೆಂಡುಗಳಲ್ಲಿ ಮಾಡೆಲ್ಗಳಿಗೆ ಹೆಚ್ಚು ಲಿಪ್ಸ್ಟಿಕ್ ಅಪ್ಲಿಕೇಶನ್ಗಳಿಗಾಗಿ ಗಿನ್ನೆಸ್ ದಾಖಲೆ ಮಾಡುವಲ್ಲಿ ಪಾತ್ರರಾಗಿದ್ದಾರೆ. ಕೇವಲ 30 ಸೆಕೆಂಡುಗಳಲ್ಲಿ ನಾಲ್ಕು ವಿಭಿನ್ನ ಮಾದರಿಗಳಲ್ಲಿ ಲಿಪ್ಸ್ಟಿಕ್ ಅನ್ನು ಹಾಕಿದ್ದರು ಎನ್ನಲಾಗಿದೆ.
ಆದಾಗ್ಯೂ, ಕೆಲವು ವರ್ಷಗಳ ಹಿಂದೆ ಲಿ ಈ ಪರಿ ಪ್ರಸಿದ್ಧವಾಗಿರಲಿಲ್ಲ. ಅವರು ಚೀನಾದ ಒಂದು ಸಣ್ಣ ನಗರದ ಸೌಂದರ್ಯ ಅಂಗಡಿಯಲ್ಲಿ ಹಿಂದೆ-ಕೌಂಟರ್ ಉತ್ಪನ್ನ ಮಾರಾಟಗಾರರಾಗಿ ವೃತ್ತಿ ಪ್ರಾರಂಭಿಸಿದ್ದರು. 3-4 ವರ್ಷಗಳಲ್ಲಿ, ಅವರು ಈ ಹಂತವನ್ನು ತಲುಪಿದ್ದಾರೆ.