
ತರಬೇತುದಾರರು ಕಡಿಮೆ ಸಮಯದಲ್ಲಿ ಸಿಂಹಗಳು ಹಿಡಿಯಲು ಸಮರ್ಥರಾಗಿದ್ದರು. ಈ ವೇಳೆ ಸರ್ಕಸ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಹೆನಾನ್ ಪ್ರಾಂತ್ಯದ ಲುವೊಯಾಂಗ್‌ನಲ್ಲಿ ಈ ಘಟನೆ ಸಂಭವಿಸಿದಾಗ ಪ್ರೇಕ್ಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೊರಗೆ ಕಿರುಚಾಡುತ್ತಾ ಓಡಿದ್ದಾರೆ. ರಿಂಗ್ ನ ಬಾಗಿಲು ಸರಿಯಾಗಿ ಲಾಕ್ ಆಗಿರಲಿಲ್ಲ. ಹಾಗಾಗಿ ಸಿಂಹಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಗ್ಲೋಬಲ್ ಟೈಮ್ಸ್‌ಗೆ ತಿಳಿಸಿದ್ದಾರೆ. ಸಿಂಹಗಳನ್ನು ಸೆರೆಹಿಡಿದ ನಂತರ ಮತ್ತೆ ಪಂಜರದಲ್ಲಿ ಹಾಕಲಾಯಿತು.
ಸಿಂಹಗಳು ಹೇಗೆ ತಪ್ಪಿಸಿಕೊಂಡವು ಎಂಬುದರ ಕುರಿತು ಸರ್ಕಸ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ ಆದರೆ ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ವಿಶೇಷವಾಗಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದೆ.