
ಕೆಲವು ಕ್ರೀಡಾ ತಾರೆಗಳು ತಮ್ಮ ಅಭಿಮಾನಿಗಳ ಸಣ್ಣ ಆಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ. ಸೂಪರ್ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಈ ಸಾಲಿನಲ್ಲಿ ಸೇರುತ್ತಾರೆ.
ಪ್ಯಾರಿಸ್ ಸೇಂಟ್- ಜರ್ಮೈನ್ನ ನಾಂಟೆಸ್ ವಿರುದ್ಧದ ಸ್ವಾಶ್ಬಕ್ಲಿಂಗ್ ಪಂದ್ಯದ ನಂತರ, ಮೆಸ್ಸಿಯನ್ನು ಭದ್ರತಾ ಸಿಬ್ಬಂದಿ ಸುತ್ತುವರಿದು ಡ್ರೆಸ್ಸಿಂಗ್ ರೂಂಗೆ ಕರೆದೊಯ್ಯುತ್ತಿದ್ದಾಗ ಪುಟ್ಟ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಪ್ರಯತ್ನಿಸಿದರು.
ಆದರೆ ಭದ್ರತಾ ಸಿಬ್ಬಂದಿ ಆತನನ್ನು ಎಳೆದು ಹೊರಹಾಕಲು ಪ್ರಯತ್ನಿಸಿದ್ದಾರೆ. ಇಡೀ ಘಟನೆಗೆ ಸಾಕ್ಷಿಯಾಗಿದ್ದ ಮೆಸ್ಸಿ, ಬಾಲಕನ ರಕ್ಷಣೆಗೆ ಬಂದು ಸೆಲ್ಫಿಗೆ ಅವಕಾಶ ಮಾಡಿಕೊಟ್ಟರು.
ಮೆಸ್ಸಿ ಮತ್ತು ಅವರ ಯುವ ಅಭಿಮಾನಿಯನ್ನು ಒಳಗೊಂಡ ಸೆಲ್ಫಿ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಎಳೆಯುತ್ತಿದ್ದದನ್ನು ಗಮನಿಸಿದ ಮೆಸ್ಸಿ ಅವರನ್ನು ತಡೆದು ತನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಹುಡುಗನನ್ನು ಕರೆದ ಅವರ ಗೆಸ್ಚರ್ ಗಮನ ಸೆಳೆದಿದೆ. ಈ ಘಟನೆ ನಡೆದಾಗ ಮೆಸ್ಸಿ ಮುಖದಲ್ಲೂ ಕಿರು ನಗು ಕಾಣಿಸುತ್ತದೆ.
ಜಾಲತಾಣದಲ್ಲಿ ನೆಟ್ಟಿಗರು ಮೆಸ್ಸಿಯ ಸ್ವೀಟ್ ಗೆಸ್ಚರ್ ಅನ್ನು ಇಷ್ಟಪಟ್ಟಿದ್ದು, ಪ್ರತಿಕ್ರಿಯೆ ನೀಡಿದ್ದಾರೆ.