ಮೆಕ್ಸಿಕೋ ನಗರದ ಪಶ್ಚಿಮಕ್ಕೆ ಇರುವ ಶಾಂತ ಪೆಡ್ರೊ ಚೋಲುಲಾ ಪಟ್ಟಣದ ನಿವಾಸಿಗಳು ಬೀದಿಯಲ್ಲಿ ಸಿಂಹವೊಂದು ಓಡಾಡುವುದನ್ನು ಕಂಡು ಭಯಭೀತರಾಗಿದ್ದರು. ದಾರಿಯಲ್ಲಿ ಹೋಗುವವರು ಸಿಂಹ ರಸ್ತೆ ಮೇಲೆ ನಡೆಯುತ್ತಿರುವ ಫೋಟೊ ಮತ್ತು ವಿಡಿಯೊಗಳನ್ನು ತೆಗೆದಿದ್ದಾರೆ.
ಮೇಯರ್ ಕಚೇರಿಯ ಹೇಳಿಕೆಯಲ್ಲಿ, “ಸಿಂಹವು ಕಾಲುದಾರಿಯಲ್ಲಿ ಕಾಣಿಸಿಕೊಂಡಿತ್ತು, ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಯಿತು, ಅವರು ತಕ್ಷಣವೇ ಘಟನೆಯನ್ನು ಅಧಿಕಾರಿಗಳಿಗೆ ವರದಿ ಮಾಡಿದ್ದು, ಬಳಿಕ ಸಿಂಹವನ್ನು ತ್ವರಿತವಾಗಿ ಸೆರೆಹಿಡಿಯಲಾಗಿದೆ. ಘಟನೆಯ ಮೂಲ ಮತ್ತು ಸಂದರ್ಭಗಳ ಬಗ್ಗೆ ತನಿಖೆಗಳು ನಡೆಯುತ್ತಿವೆ ಮತ್ತು ಅದರ ಮರುಕಳಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದಿದೆ.
ಮೆಕ್ಸಿಕನ್ ಕಾನೂನು ಪ್ರಕಾರ, ಪರಿಸರ ಸಂರಕ್ಷಣೆಗಾಗಿ ಫೆಡರಲ್ ಅಟಾರ್ನಿ ಜನರಲ್ ಕಚೇರಿಯಿಂದ ಪರವಾನಗಿ ಪಡೆದಿದ್ದರೆ ವನ್ಯಜೀವಿಗಳನ್ನು ಹೊಂದಲು ಅನುಮತಿಸುತ್ತದೆ.