ನಿವೃತ್ತಿ ಉಳಿತಾಯಕ್ಕಾಗಿ ಹೊಸ ತೆರಿಗೆ ಮತ್ತು ಕಡಿತ ಮಾನದಂಡವನ್ನು ಇಪಿಎಫ್ಒ ಪ್ರಕಟಿಸಿದ್ದು, ಟಿಡಿಎಸ್ ಬಗ್ಗೆ ಪ್ರಸ್ತಾಪಿಸಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ರೂ. 2.5 ಲಕ್ಷ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ರೂ. 5 ಲಕ್ಷದ ಮಿತಿಗಿಂತ ಹೆಚ್ಚಿನ ಪಿಎಫ್ ಕೊಡುಗೆಗಳಿಗಾಗಿ ಹೊಸ ತೆರಿಗೆ ಪ್ರಸ್ತಾಪಿಸಲಾಗಿದೆ. ಪಿಎಫ್ ಅಂತಿಮ ಸೆಟಲ್ಮೆಂಟ್ಗೆ ಟಿಡಿಎಸ್ ಅನ್ವಯಿಸುತ್ತದೆ, ಹಾಗೆಯೇ ಎಲ್ಲರೂ ಪಾವತಿಸಬೇಕಿಲ್ಲ.
ಇಪಿಎಫ್ ಮಾನದಂಡದ ಪ್ರಕಾರ, ಟಿಡಿಎಸ್ ಐದು ಸಾವಿರ ರೂ.ಗಿಂತ ಕಡಿಮೆ ಇದ್ದರೆ ಭಾರತೀಯ ನಿವಾಸಿಗಳಿಗೆ ಯಾವುದೇ ಕಡಿತವಿರುವುದಿಲ್ಲ.
ಅಂಗಡಿಗಳಲ್ಲಿ ಪೂಜಾ ಸ್ಥಳ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ….? ವಾಸ್ತುಶಾಸ್ತ್ರ ಏನು ಹೇಳುತ್ತದೆ….?
ಪಿಎಫ್ ಖಾತೆಯು ಪ್ಯಾನ್ಗೆ ಸಂಪರ್ಕಗೊಂಡಿದ್ದರೆ ಟಿಡಿಎಸ್ ದರವು ಶೇ.10 ಆಗಿರುತ್ತದೆ ಎಂದು ಇಪಿಎಫ್ ಒ ನಿರ್ದಿಷ್ಟಪಡಿಸಿದೆ. ಪ್ಯಾನ್ಗೆ ಸಂಪರ್ಕ ಹೊಂದಿಲ್ಲದಿದ್ದರೆ, ಟಿಡಿಎಸ್ ದರ ಶೇ.20ಕ್ಕೆ ನಿಗದಿಪಡಿಸಲಾಗಿದೆ. ಅಂದರೆ ದ್ವಿಗುಣಗೊಳಿಸಲಾಗುತ್ತದೆ.
ತೆರಿಗೆಗೆ ಒಳಪಡುವ ಆದಾಯವನ್ನು ಪಡೆಯುವ ಪ್ರತಿಯೊಬ್ಬ ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 206 ಎಎ ಪ್ರಕಾರ ತಮ್ಮ ಪ್ಯಾನ್ ಅನ್ನು (ಇಪಿಎಫ್ಒ) ಒದಗಿಸಬೇಕಾಗುತ್ತದೆ.
ಟಿಡಿಎಸ್ ರಿಟರ್ನ್ ಪಡೆಯಲು ಆದಾಯ ತೆರಿಗೆ ಕಾಯಿದೆಯ 26 ಕ್ಯೂ ಮತ್ತು 27 ಕ್ಯೂ ಫಾರ್ಮ್ಗಳನ್ನು ಬಳಸಬಹುದು.
ಮೊದಲ ತ್ರೈಮಾಸಿಕಕ್ಕೆ (ಏಪ್ರಿಲ್ನಿಂದ ಜೂನ್ವರೆಗೆ) ಟಿಡಿಎಸ್ ರಿಟರ್ನ್ ಸಲ್ಲಿಸಲು ಆರ್ಥಿಕ ವರ್ಷದ ಜುಲೈ 31 ಕೊನೆ ಆಗಿದೆ. ಎರಡನೇ ತ್ರೈಮಾಸಿಕಕ್ಕೆ (ಜುಲೈ ನಿಂದ ಸೆಪ್ಟೆಂಬರ್) ಅಕ್ಟೋಬರ್ 31 ಅಂತಿಮದಿನ. ಮೂರನೇ ತ್ರೈಮಾಸಿಕಕ್ಕೆ (ಅಕ್ಟೋಬರ್ – ಡಿಸೆಂಬರ್), ಜನವರಿ 31 ಮತ್ತು ನಾಲ್ಕನೇ ತ್ರೈಮಾಸಿಕಕ್ಕೆ (ಜನವರಿ – ಮಾರ್ಚ್) ಮೇ 31 ಆಗಿದೆ ಕೊನೆಯ ಗಡುವಾಗಿದೆ.
ಟಿಡಿಎಸ್ ರಿಟರ್ನ್ಸ್ ಸಲ್ಲಿಸದಿದ್ದಲ್ಲಿ ಪ್ರತಿ ದಿನಕ್ಕೆ ರೂ. 200 ದಂಡವನ್ನು ವಿಧಿಸಲಾಗುತ್ತದೆ ಎಂದು ಇಪಿಎಫ್ಒ ಹೇಳಿದೆ.