ಜನ್ ಧನ್ ಖಾತೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಜನ್ ಧನ್ ಖಾತೆದಾರರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದನ್ನು ಪಾಲಿಸದಿದ್ದರೆ 1 ಲಕ್ಷ 30 ಸಾವಿರ ರೂಪಾಯಿ ನಷ್ಟವಾಗಲಿದೆ. ಇದ್ರ ಲಾಭ ಬೇಕೆನ್ನುವವರು, ಜನ್ ಧನ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು.
ಜನ್ ಧನ್ ಯೋಜನೆಯ ಖಾತೆದಾರರು 1 ಲಕ್ಷ ರೂಪಾಯಿಗಳ ಅಪಘಾತ ವಿಮೆ ಪಡೆಯುತ್ತಾರೆ. ಆದರೆ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ಈ ಪ್ರಯೋಜನ ಸಿಗುವುದಿಲ್ಲ. ಈ ಖಾತೆಯಲ್ಲಿ 30000 ರೂಪಾಯಿಗಳ ಅಪಘಾತ ಮರಣ ವಿಮೆ ಕೂಡ ಸಿಗುತ್ತದೆ. ಇದಕ್ಕೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿರಬೇಕಾಗುತ್ತದೆ. ಜನ್ ಧನ್ ಖಾತೆ, ಆಧಾರ್ ಜೊತೆ ಲಿಂಕ್ ಆದ್ರೆ 1 ಲಕ್ಷ ರೂಪಾಯಿ ಅಪಘಾತ ವಿಮೆ ಹಾಗೂ ಆಧಾರ್ ಜೊತೆ ಬ್ಯಾಂಕ್ ಖಾತೆ ಲಿಂಕ್ ಆದ್ರೆ ಮರಣ ವಿಮೆ ಸಿಗುತ್ತದೆ.
ಬ್ಯಾಂಕ್ಗೆ ಭೇಟಿ ನೀಡುವ ಮೂಲಕ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಬಹುದು. ಆಧಾರ್ ಕಾರ್ಡ್ನ ಫೋಟೋ ಕಾಪಿ, ಪಾಸ್ಬುಕ್ ನೀಡಬೇಕಾಗುತ್ತದೆ. ಹಲವು ಬ್ಯಾಂಕ್ಗಳು ಈಗ ಎಸ್ಎಂಎಸ್ ಮೂಲಕ ಲಿಂಕ್ ಸೌಲಭ್ಯ ನೀಡ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ಎಂಎಸ್ ಗೆ ಹೋಗಿ ಅಲ್ಲಿ UID<SPACE>ಆಧಾರ್ ಸಂಖ್ಯೆ<SPACE>ಖಾತೆ ಸಂಖ್ಯೆಯನ್ನು 567676 ಗೆ ಕಳುಹಿಸಬೇಕು. ಆಗ ಬ್ಯಾಂಕ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾಗುತ್ತದೆ.
ಆಧಾರ್ ಮತ್ತು ಬ್ಯಾಂಕ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಬೇರೆಯಾಗಿದ್ದರೆ ಲಿಂಕ್ ಆಗುವುದಿಲ್ಲ. ಹತ್ತಿರದ ಎಟಿಎಂನಿಂದ ಬ್ಯಾಂಕ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಬಹುದು.