
ಸೀಮಿತ ಆವೃತ್ತಿಯ ಈ ವಾಚ್ ಅತ್ಯಾಕರ್ಷಕವಾಗಿದ್ದು, ಕೇಸರಿ ಬಣ್ಣದ ಬೆಲ್ಟ್ ಹೊಂದಿದೆ. ಅಲ್ಲದೆ ಗಡಿಯಾರದ ಮುಳ್ಳು 9 ಗಂಟೆಗೆ ಬಂದಾಗ ‘ರಾಮ ಮಂದಿರ’ ಹಾಗೂ ಗಡಿಯಾರದ ಮುಳ್ಳು 6 ಗಂಟೆಗೆ ಬಂದಾಗ ‘ಜೈ ಶ್ರೀ ರಾಮ್’ ಎಂದು ಬರುತ್ತದೆ. ಅಲ್ಲದೆ ಭಗವಾನ್ ಶ್ರೀ ರಾಮ ಹಾಗೂ ಆಂಜನೇಯರ ಚಿತ್ರ ಸಹ ಇರುತ್ತದೆ.
ಒಟ್ಟು 49 ಸೀಮಿತ ಆವೃತ್ತಿಯ ವಾಚುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ 35 ವಾಚುಗಳು ಮಾರಾಟಕ್ಕೆ ಸಿದ್ಧವಾಗಿವೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಈ ವಾಚುಗಳನ್ನು ಮಾರಾಟ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ಕಂಪನಿ ಹೇಳಿದೆ.