ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್ ಕಪೂರ್ ಸಹ ಕತ್ರಿನಾ ಮದುವೆಗೆ ಆಮಂತ್ರಣ ಪಡೆಯುವುದಿಲ್ಲ ಎನ್ನಬಹುದು.
ಕತ್ರಿನಾ ಹಾದಿಯಲ್ಲೇ ಕಾಲಿಟ್ಟಿರುವ ಆಕೆಯ ಭಾವಿ ಪತಿ ವಿಕ್ಕಿ ಕೌಶಲ್ ಸಹ ತಮ್ಮ ಮಾಜಿ ಪ್ರೇಯಸಿ ಹರ್ಲೀನ್ ಸೇಥಿಯನ್ನು ತಮ್ಮ ಮದುವೆಗೆ ಆಮಂತ್ರಿಸಿಲ್ಲ. ವಿಕ್ಕಿ ಹಾಗೂ ಹರ್ಲೀನ್ ಎರಡು ವರ್ಷಗಳ ಮಟ್ಟಿಗೆ ಡೇಟಿಂಗ್‌ನಲ್ಲಿದ್ದರು.
’ಸಜೂ’ ಹಾಗೂ ’ಉರಿ’ ಚಿತ್ರಗಳ ಗೆಲುವಿನ ಬಳಿಕ ವಿಕ್ಕಿ ತಮ್ಮ ಮಾಜಿ ಪ್ರೇಯಸಿಯೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಖುದ್ದು ಹರ್ಲಿನ್ ಅವರೇ ಹೇಳಿಕೊಂಡಿದ್ದರು.
ಇದೀಗ ತಮ್ಮ ವೃತ್ತಿಯಲ್ಲಿ ನಿರತರಾಗಿರುವ ಹರ್ಲಿನ್, ಎಕ್ತಾ ಕಪೂರ್‌ರ ’ದಿ ಟೆಸ್ಟ್ ಕೇಸ್ 2’ನಲ್ಲಿ ನಟಿಸಲಿದ್ದಾರೆ.